loading...

ಖಾನಾಪುರ: ತಾಲೂಕಿನ ಜುಂಜವಾಡ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾದ ರೈತ ಶಿವಾಜಿ ಲಾಡ ಅವರ ಪತ್ನಿ ರೇಣುಕಾ ಅವರಿಗೆ ಗುರುವಾರ ಶಾಸಕ ಅರವಿಂದ ಪಾಟೀಲ ಸರ್ಕಾರದಿಂದ ಮಂಜೂರಾದ ರೂ.5 ಲಕ್ಷ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಅವರೊಳ್ಳಿ ಗ್ರಾಮದ ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದ ರೈತ ರುದ್ರಪ್ಪ ಪೇಜೊಳ್ಳಿ ಅವರ ತಂದೆ ಯಲ್ಲಪ್ಪ ಅವರಿಗೆ ಸರ್ಕಾರದಿಂದ ಮಂಜೂರಾದ 1 ಲಕ್ಷ ಮೊತ್ತದ ಪರಿಹಾರದ ಚೆಕ್ಕನ್ನು ನೀಡಲಾಯಿತು. ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ಸಹಾಯಕ ಕೃಷಿ ನಿರ್ದೇಶಕ ಡಿ ಬಿ ಚವ್ಹಾಣ, ಕೃಷಿ ಅಧಿಕಾರಿ ಬಿ.ಆರ್ ಕೋಳಿ, ರೈತ ಮುಖಂಡರಾದ ಶಂಕರ ಗುಳೇಕರ, ಯಶವಂತ ಕೋಡೊಳಿ ಹಾಗೂ ಇತರರು ಇದ್ದರು.

loading...