loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜೈನ ಇಂಟರ್‍ನ್ಯಾಷನಲ್ ವುಮನ್ ಆರ್ಗನೈಜೇಶನ್ ಜಿವೋ ಸಂಸ್ಥೆಯ ಬೆಳಗಾವಿ ವಿಭಾಗದ ವತಿಯಿಂದ ಇತ್ತೀಚೆಗೆ ಕುರಣಾಲಯ ಆಶ್ರಮಕ್ಕೆ ಭೇಟಿ ನೀಡಿ ದಿನನಿತ್ಯ ಅಗತ್ಯ ವಿವಿಧ ವಸ್ತುಗಳ ದೇಣಿಗೆ ನೀಡಲಾಯಿತು.
ಜೀವೊ ಸಂಸ್ಥೆಯ ವತಿಯಿಂದ ಅನ್ನಧಾನ್ಯ, ಹಣ್ಣು ಹಂಪಲ, ಹೊಸ ಬಟ್ಟೆಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕರುಣಾಲಯ ಆಶ್ರಮದ ಸಂಸ್ಥಾಪಕಿ ಹಾಗೂ ಸಂಚಾಲಕಿ ಅನಿತಾ ರಾಡ್ರಿಗ್ಸ್ ಅವರು ಮಾತನಾಡಿ, 2004 ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಈ ಸಂಸ್ಥೆಯಲ್ಲಿ ಅನಾಥ ಮಕ್ಕಳು, ಅಂಗವಿಲಕರು, ಮಾನಸಿಕವಾಗಿ ತೊಂದರೆಗೊಳಗಾದ ವ್ಯಕ್ತಿಗಳು ಹಾಗೂ ವೃದ್ಧರಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿವೋ ಸಂಸ್ಥೆಉಪಾಧ್ಯಕ್ಷ ಸೀಮಾ ಶಹಾ, ಸವಿತಾಬೇನ ಮೆಹತಾ, ಪ್ರೇಮಿಳಾ ಜೈನ, ನಳಿನಿ ಕೋಠಾರಿ, ಸೀಮಾ ಶಹಾ, ಭಾಗ್ಯವಂತಿ ಪೋರವಾಲ, ಸಂಗೀತಾ ಅನ್ನೋಜಿ, ಸುಜಾತಾ ಮಗದುಮ್ಮ, ಪ್ರಭಾ ಕಾವೆಡಿಯಾ, ಸರಲಾ ಜೈನ,ಸುಶೀಲಾ ಕಾವೆಡಿಯಾ, ಮಾಣಿಕ ಕಲಮನಿ, ಶರ್ಮಿಲಾ ರಾಣಾವತ, ಭಾವನಾ ನಹಾಟಾ, ರಂಜನ ಜೈನ, ದೀಪಾ ಅನಿಗೋಳ, ವರ್ಷಿತಾ ಛಾಜೇಡ, ಕಲ್ಪನಾ ಜೈನ, ರೂಪಾಲಿ ಪೋರವಾಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...