ಖಾನಾಪುರ: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿನೂತನವಾದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಸಿವಿಲ್ ಇಂಜಿನಿಯರ್‍ಗಳು ಹೊಸ ಆವಿಷ್ಕಾರಗಳನ್ನು ಬಳಸಲು ಮುಂದಾಗಬೇಕು ಎಂದು ಉದ್ಯಮಿ ಮತ್ತು ಪಾರಿಶ್ವಾಡದ ಹನಿವೆಲ್ ಶಾಲೆಯ ಅಧ್ಯಕ್ಷ ಸುಭಾಸ ಗುಳಶೆಟ್ಟಿ ಕರೆ ನೀಡಿದರು.
ಪಟ್ಟಣದಲ್ಲಿ ಶುಕ್ರವಾರ ಕಂನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಮತ್ತು ಜೆಎಸ್‍ಡಬ್ಲ್ಯೂ ಸಂಸ್ಥೆಯ ವತಿಯಿಂದ ಸಿವಿಲ್ ಇಂಜಿನಿಯರ್‍ಗಳಿಗಾಗಿ ಆಯೋಜಿಸಿದ್ದ ತಂತ್ರಜ್ಞಾನ ಅಭಿವೃದ್ಧಿ ಕುರಿತ ವಿಶೇಷ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಗ್ರಾಹಕರಿಗೆ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ನೀಡುವ ನಿಟ್ಟಿನಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ. ಲಕ್ಷಾಂತರ ಹಣ ವ್ಯಯಿಸಿ ಕಟ್ಟಡ ನಿರ್ಮಿಸುವ ಗ್ರಾಹಕರ ಭವಿಷ್ಯದ ಬಗ್ಗೆ ವಿವೇಚಿಸಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ತಂತ್ರಜ್ಞಾನದ ಬಳಕೆಯಿಂದ ಉತ್ತಮ ಫಲಿತಾಂಶ ನೀಡಲು ಪ್ರತಿಯೊಬ್ಬ ಇಂಜಿನಿಯರ್‍ಗಳು ಯತ್ನಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಎಸ್‍ಡಬ್ಲ್ಯೂ ಸಂಸ್ಥೆಯ ಡಿಜಿಎಂ ಎಲ್.ಆರ್ ಮಂಜುನಾಥ, ವ್ಯವಸ್ಥಾಪಕ ಪಿ.ರಾಜೇಶ್ ಕುಮಾರ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ವಿನಯ ಬೇಹರೆ ಸೇರಿದಂತೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ಭಾಗಗಳ ಸಿವಿಲ್ ಇಂಜಿನಿಯರ್‍ಗಳು, ಕಟ್ಟಡ ವಿನ್ಯಾಸಕಾರರು, ಸಿವಿಲ್ ಗುತ್ತಿಗೆದಾರರು ಇದ್ದರು. ಉಮೇಶ ಪೆಟ್ರೋಡ ಕಾರ್ಯಕ್ರಮ ನಿರ್ವಹಿಸಿದರು.
loading...