ಇಂದಿನಿಂದ ತಿಗಡೊಳ್ಳಿಯಲ್ಲಿ ಪಂಚ ಕಲ್ಯಾಣ ಮಹೋತ್ಸವ

0
60
loading...

ಚನ್ನಮ್ಮ ಕಿತ್ತೂರು : ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾನ ಮಹಾಮಹೋತ್ಸವ ಇಂದಿನಿಂದ 5 ದಿನಗಳ ಕಾಲ ನಡೆಯಲಿದೆ. ಶಾಂತಮೂರ್ತಿ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು, ಕ್ರಾಂತಿ ಶಾಂತಿ ಸಂತ ಆಚಾರ್ಯರತ್ನ ಶ್ರೀ 108 ಮುನಿಕುಲರತ್ನಭೂಷಣ ವiಹಾರಾಜರು, ಜಂಗಲವಾಲೆ ಬಾಬಾ ಶ್ರೀ 108 ಚಿನ್ಮಯ ಸಾಗರ ಮುನಿಮಹಾರಾಜರು ಸಾನಿಧ್ಯ ವಹಿಸಿಲಿದ್ದಾರೆ. ಬೈಲೂರು ನಿಷ್ಠಲ ಮಂಟಪದ ನಿಜಗುಣಾನಂದ ಸ್ವಾಮಿಜಿ, ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿಗಳಿಂದ ಪ್ರವಚನ. ಹುಕ್ಕೇರಿಯ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಲಿದ್ದಾರೆ, ವಿಜಯ ಕಲಗೌಡ್ರ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡ ಎಸ್.ಡಿ.ಎಂ, ಡಾ. ನಿರಂಜನಕುಮಾರ ಇತರರು ಆಗಮಿಸಲಿದ್ದಾರೆ.
ದಿ. 5 ರಂದು ಗರ್ಭಕಲ್ಯಾಣ. ದಿ.6 ರಂದು ಜನ್ಮ ಕಲ್ಯಾಣ. ದಿ. 7 ರಂದು ದಿಕ್ಷಾ ಕಲ್ಯಾಣ. ದಿ.8 ರಂದು ಕೇವಲ ಜ್ಞಾನ ಕಲ್ಯಾಣ. ದಿ.9 ರಂದು ನಿರ್ವಾಣ ಕಲ್ಯಾಣ, ಪ್ರತಿ ದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಇಂದಿನ ಕಾರ್ಯಕ್ರಮ ಗರ್ಭ ಕಲ್ಯಾಣ ಬೆಳ್ಳಿಗ್ಗೆ 5 ಗಂಟೆಗೆ ಮಂಗಲವಾದ್ಯ ಘೋಷ. 6 ಕ್ಕೆ ನಾಂದಿ ಮಂಗಲ ಆಚಾರ್ಯ ನಿಮಂತ್ರಣ ಪ್ರತಿಷ್ಠಾಚಾರ್ಯ ನಿಮಂತ್ರಣ ಇಂದ್ರ ಪ್ರತಿಷ್ಠಾ. 8 ಕ್ಕೆÉ ಧ್ವಜಾರೋಹಣ ಮಂಟಪ ಉದ್ಘಾಟನೆ ವೇದಿ ಪ್ರತಿಷ್ಠಾ ಮಂಗಲ ಕುಂಭ ನಯನ ಪೀಠ ಯಂತ್ರ ಆರಾಧನಾ ಪಂಚಾಮೃತ ಅಭಿಷೇಕ ವiಹಾ ಶಾಂತಿಕ. ಮಧ್ಯಾಹ್ನ 2 ಕ್ಕೆ ಧರ್ಮ ಸಭಾ ಹಾಗೂ ಪ.ಪೂ. ಮಹಾರಾಜರಿಂದ ಪ್ರವಚನ ಸವಾಲಗಳು ಮಂದಿರದಲ್ಲಿ ಯಾಗಮಂಡಲ ವಿಧಾನ. ಸಾಯಂಕಾಲ 6ಕ್ಕೆ ಅಂಕುರಾರೋಪನ ಶಾಂತಿ ಹೋಂ ಪಂಚಕುಂಭ ವಿನ್ಯಾಸ ಛೇರಿತ್ರಾ ಡನ ಭದ್ರಕುಂಭ ನಯನ ಧ್ವಜಪಟ ವಿಹಾರ, ಗರ್ಭ ಕಲ್ಯಾಣಕ ಇಂದ್ರ ಸಭಾ ಕುಬೇರ ರತ್ನ ವೃಷ್ಠಿ 16 ಸ್ವಪ್ನ ದರ್ಶನ ಅಪ್ಠ ಕುಮಾರಿಕೆಯರಿಂದ ಮಾತೆಯ ಸೇವೆ, ಸಂಗೀತ, ಆರತಿ ಹಾಗೂ ಇತ್ಯಾದಿ ಕಾರ್ಯಕ್ರಮಗಳು ಜರಗುತ್ತವೆ. ತಿಗಡೊಳ್ಳಿ ಗ್ರಾಮದ ಹಿನ್ನೆಲೆ ಶಾಂತಿನಾಥ ತಿರ್ಥಂಕರ ಶಿಲೆ ಗ್ರಾಮ ಪ್ರವೇಶ ಧ್ವಾರದಲ್ಲಿ ರತ್ನತ್ರೆಯ ಜೈನ ಮಂದಿರವಿದ್ದು, ಇದು ಉತ್ತಾರಾಭಿಮುಖವಾಗಿದೆ. ಇಲ್ಲಿ 1927ರಲ್ಲಿ ಸಮೀಪದ ದೇಗುಲಹಳ್ಳಿ ಗ್ರಾಮದ ಕಲ್ಲು ಗುಡಿ ಹತ್ತಿರ ನೂರು ಅಡಿ ದಕ್ಷಿಣ ದಿಕ್ಕಿಗೆ 1008ನೇ ಶಾಂತಿನಾಥ ತಿರ್ಥಂಕರ ನಾಲ್ಕು ಅಡಿಯ ಕಪ್ಪು ಮಿಶ್ರೀತ ಹಸಿರು ಬಣ್ಣದ ಶಿಲೆ ದೊರೆತಿದೆ. ಪಾದದ ಬುಡದಲ್ಲಿರುವ ಶಾಸನದ ಪ್ರಕಾರ ಬಂದಿ ಶೆಟ್ಟಿ ಎಂಬ ಶ್ರಾವಕನು ಈ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾನೆಂದು ತಿಳಿದು ಬರುತ್ತದೆ. ಕನ್ನಡ ವಿಶ್ವ ವಿದ್ಯಾಲಯ ಪ್ರಾಚ್ಯ ವಸ್ತು ಇಲಾಖೆ ಅಧ್ಯಯನದ ಪ್ರಕಾರ 12 ನೇ ಶತಮಾನದಲ್ಲಿ ಗೋವೆ ಕಂದಂಬರು ರಾಜ್ಯ ಬಾರ ಮಾಡುತ್ತಿದ್ದರು ಅಕ್ಷರ ಶೈಲಿ ಪ್ರಕಾರ 11-12 ನೇ ಶತಮಾನದೆಂದು ತಿಳಿದು ಬಂದಿದೆ.
ಮೂರು ಬೆಟ್ಟಗಳಿಂದ ಆವೃತವಾದ ಹಳ್ಳಿ, ಮೂರು ಸಾಲು ಉಳ್ಳ ಹಳ್ಳಿ ಎಂಬ ಕಾರಣ ಗ್ರಾಮಕ್ಕೆ ತಿಗಡೊಳ್ಳಿ ಎಂದು ಹೆಸರು ಬಂದಿದೆ. ಗ್ರಾಮದಲ್ಲಿ ಗ್ರಾಮದೇವಿಯರ, ಕಲ್ಮೇಶ್ವರ ದೇವಸ್ಥಾನವಿದ್ದು ಎಲ್ಲ ಧರ್ಮಿಯರು ಸೇರಿಕೊಂಡು ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಗ್ರಾಮದಲ್ಲಿ 300ಕ್ಕೂ ಹೆಚ್ಚು ಜೈನ ಕುಟುಂಬಗಳಿದ್ದು ಧಾರ್ಮಿಕ ಕಾರ್ಯಗಳಿಗೆ ಸದಾ ಮುಂದಾಗುತ್ತಾರೆ. 1980 ರಲ್ಲಿ ಗ್ರಾಮದಲ್ಲಿ ನೂತನ ಜಿನ ಮಂದಿರ ನಿರ್ಮಾಣ ಮಾಡಿ ಶಾಂತಿನಾಥ ತಿರ್ಥಂಕರ ಶಿಲೆಯ ಜೊತೆಗೆ ಕುಂತುನಾಥ, ಅರ್ಹನಾಥ ತಿರ್ಥಂಕರ ಮೂರ್ತಿಗಳ ಜೊತೆಗೆ ಪದ್ಮಾವತಿ, ಜ್ವಾಲಾಮಾಲಿನಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಂಚ ಕಲ್ಯಾಣ ಮಹೋತ್ಸವ ಕೈಗೊಂಡಿರುವದು ತಿಳಿದು ಬರುತ್ತದೆ. ನಂತರ 2005ರಲ್ಲಿ ಮಾನಸ ಸ್ತಂಭ ನಿಮಾರ್ಣ ಮಾಡಿ ಪಂಚ ಕಲ್ಯಾಣ ಮಹೋತ್ಸವ ಕೈಗೊಳ್ಳಲಾಗಿತ್ತು. ಸಮಾಜ ಕಲ್ಯಾಣ, ಸರ್ವ ಧರ್ಮದ ಸುಖ ಶಾಂತಿ ನೆಮ್ಮದಿ ಒಳಿತಿಗಾಗಿ ಮೂರನೇ ಪಂಚ ಕಲ್ಯಾಣ ಮಹೋತ್ಸವಕ್ಕೆ ಗ್ರಾಮ ಸಂಪೂರ್ಣ ಅಣಿಯಾಗಿದೆ.
ವಿಶೇಷ ತಯಾರಿ ತಿಗಡೊಳ್ಳಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಿ.ಬಿ.ಇನಾಮದಾರ ಅವರು ಗ್ರಾಮದ ವಿವಿಧ ಬೀದಿಗಳ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲು ರೂ. 30 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಗ್ರಾಮದಲ್ಲಿರುವ ಜಿನ ಮಂದಿರವನ್ನು ರೂ. 13 ಲಕ್ಷ ವೆಚ್ಚದಲ್ಲಿ ಜೀಣ್ರ್ಣೋದ್ದಾರ ಕೈಗೊಂಡು, ಚಂದ್ರಕಾತ ಪಾಟೀಲ ಅವರ ಜಮೀನಿನಲ್ಲಿ ಬೃಹತ ಶಾಮಿಯಾನ ನಿರ್ಮಿಸಿ ಪಂಚ ಕಲ್ಯಾಣಕ್ಕೆ ಬರುವ ಜನರಿಗೆ ಊಟ, ನೀರು ಸಹಿತ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

loading...