loading...

ಇಸ್ಲಾಮಾಬಾದ್: ಹಿಜ್ಬುಲ್ ಉಗ್ರ ಸಬ್ಜಾರ್ ಅಹ್ಮದ್ ಭಟ್ ಸೇರಿದಂತೆ 12 ಮಂದಿ ಕಾಶ್ಮೀರಿ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿರುವುದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು, 12 ಜನರ ಪೈಕಿ ಮೂವರ ಹತ್ಯೆ ನ್ಯಾಯಾಂಗ ವ್ಯಾಪ್ತಿಯಿಂದ ಹೊರತಾದ್ದದ್ದು ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಗಂಭೀರತೆಯನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಸಮುದಾಯ ಮುಖ್ಯವಾಗಿ ವಿಶ್ವಸಂಸ್ಥೆ, ಇಸ್ಲಾಮಿಕ್ ಸಹಕಾರ ಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಮಧ್ಯಪ್ರವೇಶಿಸಿ, ರಕ್ಷಣೆಯಿಲ್ಲದ ಕಾಶ್ಮೀರಿಗಳ ನಿರ್ದಯಿ ಹತ್ಯೆಯನ್ನು ನಿಲ್ಲಿಸಲು ಭಾರತಕ್ಕೆ ಕರೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ನಡೆಯುವ ಹಿಂಸಾಚಾರ ಪ್ರಸಾರವಾಗದಂತೆ ಸಾಮಾಜಿಕ ಮತ್ತು ಇತರ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಆದರೂ, ಅಲ್ಲಿನ ಹಿಂಸಾಚಾರದ ಬಗ್ಗೆ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳಾಗುತ್ತಿವೆ. ಕಾಶ್ಮೀರದಲ್ಲಿ ಅಮಾಯಕರ ಮೇಲೆ ನಡೆಯುವ ದೌರ್ಜನ್ಯವನ್ನು ಮುಚ್ಚಿಡಲು ಭಾರತ ಗಡಿ ನಿಯಂತ್ರಣ ರೇಖೆ ಬಳಿಯ ಉದ್ವಿಗ್ನತೆಯನ್ನು ಎತ್ತಿತೋರಿಸುತ್ತಿರುತ್ತದೆ. ಕಾಶ್ಮೀರಿ ಯುವಕರ ಪ್ರತಿರೋಧವನ್ನು ಮುಚ್ಚಿಡಲು ಭಾರತ ಅದನ್ನು ಭಯೋತ್ಪಾದನೆಯೊಂದಿಗೆ ಹೋಲಿಕೆಗೆ ಯತ್ನಿಸುದ್ದಿದೆ ಎಂದು ಸರ್ತಾಜ್ ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಪ್ರೊಫೈಲ್ ಭಯೋತ್ಪಾದಕನೆಂದೇ ಹೇಳಲಾಗುತ್ತಿದ್ದ ಸಬ್ಜಾರ್ ಭಟ್ ಹಾಗೂ ಇನ್ನಿತರೆ 10 ಉಗ್ರರನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿತ್ತು

loading...