loading...

ಕನ್ನಡಮ್ಮ ಸುದ್ದಿ-ಧಾರವಾಡ : ಪ್ರತಿಯೊಬ್ಬರು ನಿಯಮಿತವಾಗಿ ಯೋಗಾಸಾನ ಮಾಡುವುದರ ಮೂಲಕ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಮನೋರೋಗತಜÐರಾದ ಡಾ. ಆದಿತ್ಯಾ ಪಾಂಡುರಂಗಿ ಹೇಳಿದರು.
ಗಿರಿ ಫೌಂಡೇಶನ್ ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗ ಹಾಗೂ ಸಂಜೀವಿನಿ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ ಉಚಿತ ಯೋಗ, ಧ್ಯಾನ ಹಾಗೂ ಆರೋಗ್ಯ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಾಗರಿಕ ಪ್ರಜೆÐಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡಾಗಲೇ ಬದುಕು ಸಾರ್ಥಕಗೊಳ್ಳಲು ಸಾಧ್ಯ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಎಮ್.ಎಸ್. ಆರೇರ ಯೋಗ ಹಾಗೂ ಧ್ಯಾನದ ಮಹತ್ವದ ಕುರಿತು ಮಾತನಾಡಿ, ಮಕ್ಕಳಲ್ಲಿ ವಿಶೇಷವಾಗಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿದಲ್ಲಿ ಅವರು ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಯೋಗ ಸಂಪನ್ಮೂಲ ವ್ಯಕ್ತಿ ಕುಮಾರ ಹಿರೇಮಠ, ಪ್ರದೀಪ ಮೇಲ್ಗಡೆ, ರಾಜು ಗಿರಿಯಪ್ಪನವರ, ಸತೀಶ ಗಿರಿಯಪ್ಪನವರ ಉಪಸ್ಥಿತರಿದ್ದರು.

loading...