ಏಳು ಬಾಂಗ್ಲಾ ಪ್ರಜೆಗಳ ಬಂಧನ

0
277
loading...

 

ಕನ್ನಡಮ್ಮ ಸುದ್ದಿ

ಬೆಳಗಾವಿ:6 ಹೊರ ದೇಶದಿಂದ ಗಡಿನಾಡಿಗೆ ಬಂದು ಅಕ್ರಮವಾಗಿ ಆಧಾರ ಕಾರ್ಡ, ರೇಷನ್ ಕಾರ್ಡ ಸೇರಿದಂತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಪಡೆದು ಪಾಸಪೋರ್ಟ ಪಡೆಯುತ್ತಿದ್ದ ಏಳು ಜನ ಬಾಂಗ್ಲಾ ಪ್ರಜೆಗಳನ್ನು ಶನಿವಾರ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅನ್ವರ ಸದ್ದಾರ, ಅಜುಬೇಗ, ಶೌಫಿ ಬೇಪಾರಿ, ಹಫೀಜ್ ಇಸ್ಲಾಂ, ಹಕೀಬ, ಅಬ್ದುಲ ಗಾಲಿ ಎಂಬ ಬಾಂಗ್ಲಾ ಪ್ರಜೆಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ  ಗಡಿಯೊಳಗೆ ನುಸುಳಿದ ಬಾಂಗ್ಲಾ ರವವಾಸಿಗಳು ಮಹ್ಮದ ಬೇಪಾರಿ ಅನಧಿಕೃತವಾಗಿ ಆಧಾರ ಕಾರ್ಡ, ರೇಷನ ಕಾರ್ಡಗಳನ್ನು ಮಾಡಿಸಿಕೊಂಡು ಪಾಸಪೋರ್ಟ ಮಾಡಿಸಿಕೊಳ್ಳಲು ತೆರಳಿದ ಸಂದರ್ಭದಲ್ಲಿ ಅವರಿಗೆ ಸ್ಥಳೀಯ ಭಾಷೆ ಮರಾಠಿ, ಕನ್ನಡ, ಇಂಗ್ಲೀಷ ಹಾಗೂ ಹಿಂದಿಯಲ್ಲಿ ಮಾತನಾಡಿಸಿದ್ದಾರೆ. ಅವರು ಮಾತನಾಡಿರುವುದು ಸಂಶಯ ಬಂದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಬಾಂಗ್ಲಾ ಪ್ರಜೆಗಳೆಂದು ತಿಳಿದು ಬಂದ ಕೂಡಲೇ ಮಾಳಮಾರುತಿ ಪೊಲೀಸರು ತನಿಖೆ ನಡೆಸಿ ಈ ಏಳು ಜನರನ್ನು ವಿಚಾರಣೆ ನಡೆಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ  ಪೊಲೀಸರು ಹಾಜರು ಪಡಿಸಲಿದ್ದಾರೆ.

ಗುರುವಾರ ಕನ್ನಡಮ್ಮ ದಿನ ಪತ್ರಿಕೆ ಬಾಂಗ್ಲಾ ಪ್ರಜೆಗಳ ಕುರಿತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳಲ್ಲಿ ಬಾಂಗ್ಲಾ ಪ್ರಜೆಗಳು ವಾಸವಾಗಿದ್ದಾರೆ. ಅವರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಇದೆ ಎಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅಲ್ಲದೆ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡಿದ ಪಾಲಿಕೆ: ಸಂಸದ ಹೆಗಡೆ ನಗರದ ಪ್ರಮುಖ ಸ್ಥಳದಲ್ಲಿ ಕಾಮಿ೯ಕರು ಇನ್ನಿತರ ಸ್ಥಾನದಲ್ಲಿ ಕಾಯ೯ನಿವ೯ರುವುದನ್ನು ಸ್ವತಃ ಪೊಲೀಸ್ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ‌. ಇಂಥವರಿಗೆ ಪಾಲಿಕೆಗಳು ವಸತಿ, ರೇಷನ್ ಕಾಡ೯, ಗ್ಯಾಸ್ ನೀಡಿ ರಕ್ಷಣೆ ಮಾಡುತ್ತಿವೆ ಎಂದು ಪಾಲಿಕೆಯ ಅಧಿಕಾರಿಗಳನ್ನು ಸಂಸದ ಅನಂಕುಮಾರ ಹೆಗಡೆ ಇಂದಿಲ್ಲಿ ತರಾಟೆಗೆ ತೆಗೆದುಕೊಂಡರು.

ಅವರು ಶುಕ್ರವಾರ   ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತ, ಪ್ರಮುಖ ನಗರಗಳಲ್ಲಿ ಬಾಂಗ್ಲಾ ನಿವಾಸಿಗಳು ಕನಾ೯ಟಕದಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ವತಃ ಆಯಾ ಜಿಲ್ಲೆಯ ಪೊಲೀಸ್ ಇಲಾಖೆಗಳು ಸರಕಾರಕ್ಕೆ ವರದಿ ಸಲ್ಲಿಸಿವೆ. ಆದರೂ ಇಲ್ಲಿನ ಬಡ ಜನರಿಗೆ ನೀಡಬೇಕಾದ ಸೌಲಭ್ಯಗಳನ್ನು ಪಾಲಿಕೆಯ ಅಧಿಕಾರಿಗಳು ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡೆಸಿದರು.

ಸರಕಾರಿ ವಸತಿಗಳು ಬಾಂಗ್ಲಾ ಪ್ರಜೆಗಳ ಪಾಲು ಅಧಿಕಾರಿಗಳ ವಿರುದ್ದ ಸಂಸದರ ಗರಂ

ಕನ್ನಡಮ್ಮ ಸುದ್ದಿ

ರಹವಾಸಿ ಆದಾರದ ಮೇಲೆ ಬಡವರನ್ನಾ ಹೇಗೆ ಅಧಿಕಾರಿಗಳು ಆಯ್ಕೆ ಮಾಡುತ್ತಾರೆ. ಇಲ್ಲಿನ ಬಡ ಜನರಿಗೆ ನೀಡಬೇಕಾದ ನಿವೇಶನಗಳನ್ನು ಬಾಂಗ್ಲಾದೇಶದ ರಹವಾಸಿಗಳಿಗೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸುರೇಶ ಅಂಗಡಿ, ಅನಂತಕುಮಾರ ಹೆಗಡೆ ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳಗಾವಿಯಲ್ಲಿ‌ ಬಡ ಜನರಿಗೆ ಹಂಚಬೇಕಾದ ಸರಕಾರಿ ನಿವೇಶನಗಳನ್ನು ಬಾಂಗ್ಲಾದೇಶದ ಜನರಿಗೆ ಹಂಚಿಕೆಯಾಗಿವೆ. ಅಧಿಕಾರಿಗಳು ಯಾವ ಆದಾರದ ಮೇಲೆ ನಿವೇಶನ‌ ಹಂಚಿಕೆ ಮಾಡಿದ್ದರಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡೆಸಿದರು.

ಕೇಂದ್ರ ಇಂಟಲಿಜೆನ್ಸ್ ವರದಿಯಾದರ ಮೇಲೆ ಸುಮಾರು ಐದು ಕೋಟಿ ಬಾಂಗ್ಲಾದೇಶದ ಜನರಿಗೆ ಇಲ್ಲಿನ ರಹವಾಸಿ ಪತ್ರ ತೆಗೆದುಕೊಂಡಿದ್ದಾರೆ. ಯಾವ ಆದಾರದ ಮೇಲೆ ಬಾಂಗ್ಲಾದೇಶದ ಜನರಿಗೆ ಮನೆ ನೀಡಿದಿರಿ ಎಲ್ಲ ದಾಖಲೆಗಳನ್ನು ತರುವಂತೆ ಅಧಿಕಾರಿಗಳಿಗೆ ಸಂಸದ ಹೆಗಡೆ ಎಚ್ಚರಿಸಿದರು.

loading...