loading...

ಕನ್ನಡಮ್ಮ ಸುದ್ದಿ
ಬೆಳಗಾವಿ:5 ನಗರದ ಫಾರ್ಮಸಿ ಕಾಲೇಜಿನ ಎರಡನೇ ವರ್ಷದ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿ ಅವರ ಮೇಲೆ ಹಲ್ಲೆ ಮಾಡಿ ಪತ್ರಕರ್ತರೆಂದು ಬ್ಲಾಕ್ ಮೇಲ್ ಮುಖಾಂತರ 30 ಸಾವಿರಕ್ಕೂ ಹೆಚ್ಚು ಹಣದ ಬೇಡಿಕೆಯಿಟ್ಟು ಮಾಧ್ಯಮಗಳಲ್ಲಿ ನಿಮ್ಮ ಮರ್ಯಾದೆ ಹರಾಜ ಹಾಕಲಾಗುವುದು ಎಂದು ಬೇದರಿಸಿದ್ದ ಐವರನ್ನು ಎಪಿಎಮ್‍ಸಿ ಪೊಲೀಸ್‍ರು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡೆಸಿದ್ದಾರೆ.
ಇತ್ತೀಚಿನ ದಿನಮಾನಗಳಲ್ಲಿ ನಗರದಲ್ಲಿ ಬ್ಲ್ಯಾಕ್ ಮೇಲ್ ನಡೆಸುವ ತಂಡಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಹಾಕಿತ್ತು. ಅದರಂತೆ ಶುಕ್ರವಾರ ಪಾರ್ಮಸಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸೋಮನಾಥನ ಕೊಠಡಿಯಲ್ಲಿ ಕೂಡಿಕೊಂಡು ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನ್ಯೂ ಗಾಂಧಿ ನಗರದ ಅಸ್ಲಂ ಇಮಾಮ ಹುಸೇನ ಮುಲ್ಲಾ (40), ಕೊತ್ವಾಲ ಗಲ್ಲಿಯ ಮಹ್ಮದ ಇಕ್ಬಾಲ್ ಮುಲ್ಲಾ(35), ಬಾಶಾಗಲ್ಲಿಯ ಸಾಧೀಕ ಡೋಣಿ(42), ಅಂಬೇಡ್ಕರಗಲ್ಲಿಯ ಮುಕ್ತಾರ (35) ಹಾಗೂ ಯುನಿಸ್ (34) ಎಂಬ ಆರೊಪಿಗಳು ಅವರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ.
ನಾವು ರಾಜ್ಯದ ಪ್ರತಿಷ್ಠಿತ ಸುದ್ದಿವಾಹಿನಿಯ ವರದಿಗಾರರೆಂದು ಅವರ ಮೇಲೆ ದಬ್ಬಾಳಿಕೆ ನಡೆಸಿ ಬ್ಲ್ಯಾಕ್ ಮಾಡಿ ನೀವು ಇಂತಿಷ್ಟು ಹಣ ನೀಡದಿದ್ದರೇ ನಿಮ್ಮ ಮಾನ ಮರ್ಯಾದೆ ರಾಜ್ಯದ ಜನರ ಮುಂದೆ ಹರಾಜ ಹಾಕಲಾಗುವುದು ಎಂದು ಬೇದರಿಸಿದ್ದಾರೆ. ಕೂಡಲೇ ವಿದ್ಯಾರ್ಥಿಗಳು ಎಪಿಎಮ್‍ಸಿ ಪೊಲೀಸ್ ಠಾಣೆಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದರು.

loading...