ಕಣಕುಂಬಿ ಗ್ರಾಮಕ್ಕೆ ಮಲಬಾರಿ ಸಹಚರರನ್ನು ಕರೆದ್ಯೊಯ್ದ ಪೊಲೀಸ್‍ರು

0
49
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಪೊಲೀಸ್‍ರು ಮಲಬಾರಿ ಸಹಚರರನ್ನು ವಶ ಪಡಿಸಿಕೊಂಡ ಹಿನ್ನಲೆಯಲ್ಲಿ ಬಿರುಸಿನಿಂದ ವಿಚಾರಣೆ ನಡೆಸಿದ್ದು ಆರೋಪಿಗಳು ಬಾಯಿ ಬಿಟ್ಟಿರುವ ಪ್ರಕಾರ ಕಣಕುಂಬಿ ಗ್ರಾಮಕ್ಕೆ ಪಂಚನಾಮೆ ಮಾಡಲು ಕರೆದೊಯ್ದಿದ್ದಾರೆ.
ಮಾಜಿ ಜಿಪಂ ಅಧ್ಯಕ್ಷ ನಜೀರ ನದಾಫ್, ಸರ್ಪ್‍ರಾಜ್ ಜಮಾದಾರ, ನವಿದ್ ಖಾಜಿ ಇವರನ್ನು ಗುರುವಾರ ಅಸುಂಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅವರು ಏಲ್ಲೆಲ್ಲಿ ಓಡಾಡಿದ್ದರು ಎಂಬ ಮಾಹಿತಿಯನ್ನು ಕಲೆಹಾಕಿದ್ದಾರೆ. ಅಲ್ಲದೇ ಅಸುಂಡಿ ಗ್ರಾಮದಲ್ಲಿ ಪಂಚನಾಮೆ ಮಾಡಿದ ಪ್ರಕಾರವಾಗಿ ಕೆಲ ಸುಳಿವು ಆಧಾರದ ಮೇಲೆ ಶುಕ್ರವಾರ ಕಣಕುಂಬಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆರೋಪಿಗಳು ಯಾವ ಸ್ಥಳದಿಂದ ತಮ್ಮ ವ್ಯವಹಾರಗಳನ್ನು ಮಾಡುತ್ತಿದ್ದರು ಎಂಬುದನ್ನು ಆರೋಪಿಗಳಿಂದ ತಿಳಿದುಕೊಂಡು ಆಯಾ ಸ್ಥಳಗಳಿಗೆ ಹೋಗಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

loading...