ಕರ್ನಾಟಕದಲ್ಲಿ ಮೋದಿ, ನಮೋ ಕ್ಯಾಂಟೀನ್‍ಗೆ ಮಾತ್ರ ಸೀಮಿತ: ಕೌಲಗಿ

0
26
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಸಂಸದ ಪ್ರಲ್ಹಾದ ಜೋಶಿಯವರು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿಯವರಿಗೆ ಮೋದಿ ಹೆಸರು ಕೇಳಿದರೆ ಹಿಸ್ಟಿರೀಯಾ ಎಂದು ವ್ಯಂಗವಾಡಿದ್ದಾರೆ. ತಮ್ಮ ವಿರುದ್ದ ಚುನಾವಣೆಗೆ ನಿಂತು ಸಚಿವರು ಸೋತ್ತಿದ್ದಾರೆಂದು ಹೇಳಿರುವ ಜೋಶಿಯವರು ತಾವು ಈ ಹಿಂದೆ ಪದವೀಧರ ಮತಕ್ಷೇತ್ರದಿಂದ ಎಚ್.ಕೆ.ಪಾಟೀಲರ ವಿರುದ್ಧ ನಿಂತು ಸೋತಿಲ್ಲವೇ? ರಾಜ್ಯಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ.
ಕರ್ನಾಟಕದಲ್ಲಿ ಮೋದಿ ಅವರ ಹೆಸರನ್ನು ಬಿ.ಜೆ.ಪಿ ನಾಯಕರು ಪದೇ ಪದೇ ಹೇಳುವದರಿಂದ, ಏನೂ ಆಗದು, ಮೋದಿಯವರ ಆಟ ಇಲ್ಲಿ ನಡೆಯಲಾರದು. ಆದರು ಜೋಶಿಯವರು ಎಲ್ಲದಕ್ಕೂ ಮೋದಿಯವರ ಹೆಸರನ್ನು ಹೇಳುವುದು ರಾಜ್ಯಸರ್ಕಾರ ಮಾಡುವ ಕೆಲಸಕ್ಕೆ ಮೋದಿಯವರ ಹೆಸರು ತಳಕು ಹಾಕುತ್ತಿರುವುದಕ್ಕೆ ಸಚಿವರು ಬೇಸರದಿಂದ ಜೋಶಿಯವರು ಕಾರಣವಿಲ್ಲದೆ ಮೋದಿಯವರ ಹೆಸರು ಜಪಿಸುವುದನ್ನು ಟೀಕಿಸಿದ್ದಾರೆ.
ವಿನಯ ಕುಲಕರ್ಣಿ ಹುಟ್ಟು ಹೋರಾಟಗಾರ ರಾಜ್ಯಕಾರಣದಲ್ಲಿ ತಾಲೂಕಾ ಜಿಲ್ಲಾ ಮಟ್ಟದಲ್ಲಿ ಬೆಳೆದು ಇಂದು ಸಚಿವರಾಗಿದ್ದಾರೆ. ಮೂಲತಹ ರೈತ ಕುಟುಂಬದಿಂದ ಬಂದವರು. ರೈತರು ಬಡವರ ಕಷ್ಟಗಳ ಬಗ್ಗೆ ಕಲ್ಪನೆ ಇದ್ದವರು. ಆದರೆ ಸಂಸದ ಜೋಶಿಯವರು ಜೀವನದಲ್ಲಿ ಯಾವುದೇ ಜನಪರ ಹೋರಾಟ ಮಾಡಿಲ್ಲ. ಹಿಂದು, ಮುಸ್ಲಿಂ ಗಲಭೆ ಹುಟ್ಟಿಸಿ ಅದರ ಮೂಲಕ ರಾಜಿಕೀಯಕ್ಕೆ ಬಂದವರು. 2004 ರಲ್ಲಿ ವಾಜಿಪೆಯವರ ಹೆಸರಿನಿಂದ 2009 ರಲ್ಲಿ ಯಡಿಯೂರಪ್ಪನವರ (ಲಿಂಗಾಯತ) ಬೆಂಬಲದಿಂದ 2013 ರಲ್ಲಿ ಮೋದಿಯವರ ಹೆಸರಿನಿಂದ ಆಯ್ಕೆ ಆಗಿರುವ ಜೋಶಿಯವರು ಅಂದು ರಾಜ್ಯಾಧ್ಯಕ್ಷರಾಗಿದ್ದರೂ ಧಾರವಾಡ ಜಿಲ್ಲೆ ಬಿಟ್ಟು ಬೇರೆ ಕಡೆ ಪ್ರವಾಸ ಮಾಡಲಿಲ್ಲ. ಅಪ್ಪಿತಪ್ಪಿ ಜೋಶಿಯವರಿಗೆ ಮತ ಕೇಳಲಿಲ್ಲ. ಮೋದಿಯವರಿಗೆ ಮೋದಿ ಸರ್ಕಾರಕ್ಕೆ ಎಂದು ಪ್ರಚಾರ ಮಾಡಿದ್ದರು.
ಅಸಲಿಗೆ ಧಾರವಾಡ ಜಿಲ್ಲೆಯಲ್ಲಿ ಮೋದಿಯವರ ಹೆಸರು ಹೇಳಿದರೆ, ಬಿ.ಜೆ.ಪಿ ಗೆ ಯಾವ ಲಾಭವು ಇಲ್ಲ. 600 ದಿನಗಳಿಂದ ಕಳಸಾ ¨ಂಡೂರಿ, ಮಹಾದಾಯಿಗಾಗಿ ರೈತರು ಹೋರಾಟ ಮಾಡುತ್ತಿದ್ದರು, ಪ್ರಧಾನಿ ಮೋದಿಯವರು ರೈತರತ್ತ ತಿರುಗಿ ನೋಡಿಲ್ಲ. ಅಷ್ಟೇ ಅಲ್ಲ ಬರಪೀಡಿತ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರ, ಗುಜರಾತ ಇವುಗಳಿಗೆಲ್ಲಾ ಅತಿ ಹೆಚ್ಚು ಹಣ ಬಿಡುಗಡೆ ಮಾಡಿ ಕರ್ನಾಟಕಕ್ಕೆ ಕೇವಲ 1782 ಕೋಟಿ ಬಿಡುಗಡೆ ಮಾಡಿದ್ದಾರೆ. 2 ವರ್ಷದಲ್ಲಿ ವಿನಯ ಕುಲಕರ್ಣಿ ಜಿಲ್ಲೆಗೆ ಏನು ಮಾಡಿದ್ದಾರೆಂದು ಕೇಳುವ ಜೋಶಿ 15 ವರ್ಷದಿಂದ ಸಂಸದರಾಗಿ ಜಿಲ್ಲೆಗೆ ಯಾವ ಅಭಿವೃದ್ಧಿ ಮಾಡಿದ್ದಾರೆ.? 2018 ರಲ್ಲಿ ಜಗದೀಶ ಶೆಟ್ಟರನ್ನು 2019 ರಲ್ಲಿ ಸಂಸದ ಜೋಶಿಯವರನ್ನು ಸೋಲಿಸಲು ಕಾಂಗ್ರೇಸ್ ಪಕ್ಷ ಅಷ್ಟೇ ಅಲ್ಲ ಹುಬ್ಬಳ್ಳಿಯ ಆರ್,ಎಸ್.ಎಸ್ ಕಾರ್ಯಕರ್ತರೆ ತುದಿಗಾಲ ಮೇಲೆ ನಿಂತಿದ್ದಾರೆ. ತಮ್ಮನ್ನು ಭೇಟಿ ಆಗಲು ಬಂದವರಿಗೆ ಕೇವಲ ಮೊನಚು ಮಾತುಗಳಿಂದ ಅವಹೇಳನ ಮಾಡುತ್ತಾ ಬಂದಿರುವ ಜೋಶಿಯವರನ್ನು ಸೋಲಿಸಲು ಮಧ್ಯಮ ವರ್ಗದವರು ಬಡವರು ಕಾಯುತ್ತಿದ್ದಾರೆ.
ಕರ್ನಾಟಕದಲ್ಲಿ ಈ ಸಾರಿ ಮೋದಿಯವರ, ಅಮೀತ್ ಶಾ ರವರ ಯಾವ ತಂತ್ರಗಾರಿಕೆ ನಡೆಯುವುದಿಲ್ಲ. ಮೋದಿಯವರು ಕರ್ನಾಟಕದಲ್ಲಿ ನಮೋ ಕ್ಯಾಂಟೀನ್‍ಗೆ ಮಾತ್ರ ಸೀಮಿತವಾಗಿದ್ದಾರೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಜಿಲ್ಲಾ ಸಚಿವರನ್ನು ಲೇವಡಿ ಮಾಡಿದ ಜೋಶಿಯವರಿಗೆ ತಿರುಗೇಟು ನೀಡಿದ್ದಾರೆ.

loading...