ಕಳೆದುಕೊಂಡಿದ್ದಕಿಂತ ಹೆಚ್ಚಿನದನ್ನು ಪಡೆದ ಜಾರಕಿಹೊಳಿ ಬ್ರದರ್ಸ್- ಒಬ್ಬರು ರಾಜ್ಯ-ಮತ್ತೊಬ್ಬರು ರಾಷ್ಟ್ರ ರಾಜಕಾರಣಕ್ಕೆ – ನಿಗೂಢವಾಗುತ್ತಿದೆ ಲಖನ್ ರಾಜಕೀಯ ನಡೆ

0
536
loading...

ಕನ್ನಡಮ್ಮ ಸುದ್ದಿ

ಬೆಳಗಾವಿ 30: ಗಡಿಜಿಲ್ಲೆಯಲ್ಲಿ ಮಾಸ್ಟರ ಮೈಂಡ್ ಅಂತಲೇ ಖ್ಯಾತಿ ಗಳಿಸಿರುವ ಸತೀಶ ಜಾರಕಿಹೊಳಿ ಕಳೆದುಕೊಂಡದ್ದಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ಹುಟ್ಟುಹಾಕಿ ಗೆಲುವಿನ ನಗೆ ಬೀರಿದ್ದಾರೆ.
ಹೌದು, ಸಚಿವ ಸ್ಥಾನ ಬಿಟ್ಟುಕೊಟ್ಟ ಬಳಿದ ತನ್ನದೇ ಸೈದ್ಧಾಂತಿಕ ರಾಜಕಾರಣ ಆರಂಭಿಸಿದ್ದ ಸತೀಶ ಜಾರಕಿಹೊಳಿ ಎಐಸಿಸಿ ಪ್ರಧಾನ ಕಾರ್ಯದಶಿ೯ ಹುದ್ದೆ ದೊರೆತಿರುವುದು ಸಾಮಾನ್ಯ ವಿಷಯವೇನಲ್ಲ. ಕಳೆದ ಸುಮಾರು ತಿಂಗಳಿನಿಂದ ಸಹೋದರರ ಮುನಿಸು ಜಿಲ್ಲೆಯಲ್ಲಿ ವಿಚಿತ್ರ ರೂಪ ಪಡೆದುಕೊಂಡಿತ್ತು. ಆದರೆ ಸತೀಶ ಜಾರಕಿಹೊಳಿ ಮಾತ್ರ ಎಲ್ಲವನ್ನು ಅಳೆದು ತೂಗುವ ಮೂಲಕ ತಮ್ಮಿಬ್ಬರ ವೈಮನಸು ಶಮನಗೊಳಿಸುವ ಹೊಸದೊಂದು ದಾರಿ ಹುಡುಕಿಕೊಂಡಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರಕ್ಕೆ ಸಹೋದರರಿಬ್ಬರಿಗೂ ಸಚಿವ ಸ್ಥಾನ ಕೊಡುವುದು ಕಷ್ಟದ ಕೆಲಸವಾಗಿತ್ತು. ಇದರಿಂದ ಅವಧಿಯ ಆರಂಭದಲ್ಲಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರಿಗೆ ಕೋಕ್ ನೀಡಿ, ನಂತರದ ಅವಧಿಗೆ ಅವರ ಸಹೋದರ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಯಿತು. ಆದರೆ ಇದು ಸಹೋದರರಿಬ್ಬರ ವೈಮನಸ್ಸಿಗೆ ಕಾರಣವಾಯಿತು. ಇದರಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ರಮೇಶ ಹಾಗೂ ಸತೀಶ ಬಣಗಳು ಹುಟ್ಟುಕೊಂಡು ಸಾಕಷ್ಟು ವಿವಾದ ಹುಟ್ಟು ಹಾಕಿದ್ದವು. ಇತ್ತೀಚಿಗೆ ರಮೇಶ ಬೆನ್ನಿಗೆ ನಿಂತಿದ್ದ ಮತ್ತೊಬ್ಬ ಸಹೋದರ ಲಖನ್ ಯಮಕನಮರಡಿ ಕ್ಷೇತ್ರದಿಂದಲೇ ಸ್ಪಧರ್ಿಸುವದಾಗಿ ಹಠ ಹಿಡಿದಿದ್ದಾರೆ.
ಸತೀಶ್ಗೆ ಸ್ಥಾನ ಸಿಕ್ಕಿದ್ದು ಹೇಗೆ?
ರಾಜ್ಯದಲ್ಲಿ ಪರಿಶಿಷ್ಟರಲ್ಲಿ ಅರಿವು ಮೂಡಿಸುವ ತನ್ನದೇ ವೋಟ್ ಬ್ಯಾಂಕ ಸ್ಥಾಪಿಸಿಕೊಳ್ಳುತ್ತಿರುವ ಸತೀಶ ಜಾರಕಿಹೊಳಿ ಅವರು ಮೂಢನಂಬಿಕೆ ಹೋಗಲಾಡಿಸುವುದು, ಬುದ್ಧ,ಬಸವ, ಅಂಬೇಡ್ಕರ ವೇದಿಕೆ ಸ್ಥಾಪಿಸುವ ಮೂಲಕ ರಾಜ್ಯದ ಪರಿಶಿಷ್ಟ ಸಮುದಾಯ ನಾಯಕರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಸಮಾನ ಮನಸ್ಕರ ಮೂಲಕ ಪರಿಶಿಷ್ಟರ ಮತಸೆಳೆಯುವ ಕಾರ್ಯತಂತ್ರ ಹೆಣೆದಿದ್ದಾರೆ. ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿದ್ದ ಸತೀಶ ಜಾರಕಿಹೊಳಿ ಪಕ್ಷದ ವರಿಷ್ಠರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಇವರನ್ನು ಸಮಾಧಾನ ಪಡಿಸಲು ಹೆಚ್ಚಿನ ಅಧಿಕಾರದೊಂದಿಗೆ ಎಐಸಿಸಿ ಪ್ರಧಾನ ಕಾರ್ಯದಶರ್ಿ ಹುದ್ದೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಪಕ್ಷ ಆದೇಶಿಸಿದೆ.
ರಾಜ್ಯಕ್ಕೆ ರಮೇಶ-ರಾಷ್ಟ್ರಕ್ಕೆ ಸತೀಶ:
ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಸಹೋದರರಿಬ್ಬರು ಅಧಿಕಾರಕ್ಕಾಗಿ ತಿಕ್ಕಾಡುವದನ್ನು ನೋಡಿ ಬೇಸತ್ತ ಕೆಪಿಸಿಸಿ ಘಟಕ ಸಂಧಾನದ ಮೂಲಕ ಸಹೋದರರಿಬ್ಬರ ಕದನಕ್ಕೆ ತಾಕರ್ಿಕ ಅಂತ್ಯ ನೀಡಿದೆ. ಇದರಿಂದ ರಾಜ್ಯದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ ಜಾರಕಿಹೊಳಿ ಜಿಲ್ಲಾಮಟ್ಟದ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಳ್ಳುವುದು ಹಾಗೂ ಎಐಸಿಸಿ ಪ್ರಧಾನ ಕಾರ್ಯದಶರ್ಿಯಾಗಿ ನೇಮಕಗೊಂಡಿರುವ ಸತೀಶ ಜಾರಕಿಹೊಳಿ ರಾಜ್ಯದಲ್ಲಿ ಪರಿಶಿಷ್ಟರ ಮತ ಪಡೆಯುವ ಕಾರ್ಯತಂತ್ರ ರೂಪಿಸಬೇಕಿದೆ. ಇದರಿಂದ ಒಬ್ಬರು ರಾಜ್ಯಕ್ಕೆ, ಮತ್ತೊಬ್ಬರು ರಾಷ್ಟ್ರಕ್ಕೆ ಎಂಬಂತಾಗಿದೆ.
ಲಖನ್ ನಡೆ ನಿಗೂಢ:
ವರಿಷ್ಠರ ಸಂಧಾನದ ಬಳಿಕವೂ ತಮ್ಮದೇ ಹಠ ಮುಂದುವರೆಸಿರುವ ಲಖನ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರವನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಆದರೆ ಸತೀಶ ಮಾತ್ರ ಕ್ಷೇತ್ರ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇದರಿಂದ ಲಖನ್ಗೆ ಕಾಂಗ್ರೆಸ್ ಸೇಫ್ ಅಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಮುಂದಿನ ರಾಜಕೀಯ ನಡೆಗಳು ನಿಗೂಢವಾಗುತ್ತ ಸಾಗಿದೆ.
ಬಾಕ್ಸ
ಮೇಲ್ವರ್ಗದ ನಾಯಕರ ಮುನಿಸು:
ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಜಿಲ್ಲೆಯಲ್ಲಿ ಸಹೋದರರಿಬ್ಬರ ವೈಮನಸು ಸರಿಮಾಡಿರುವ ಕಾಂಗ್ರೆಸ್ ಇನ್ನುಳಿದ ನಾಯಕರನ್ನು ಮರೆತಿರುವುದು ಮೇಲ್ಪಂಕ್ತಿ ನಾಯಕರ ಮುನಿಸಿಗೆ ಕಾರಣವಾಗಿದೆ. ಅಹಿಂದ ಉದ್ದೇಶವಿದ್ದರೂ ಇನ್ನುಳಿದ ಜಾತಿಗಳ ಜನರ ಮನವೊಲಿಸಿ ಆಯ್ಕೆಯಾಗಿರುವ ಲಿಂಗಾಯತ, ಬ್ರಾಹ್ಮಣ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ನಾಯಕರ ಮುನಿಸು ಹೆಚ್ಚಾಗಲು ಕಾರಣ. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಡಿ.ಬಿ.ಇನಾಂದಾರ, ಶಾಸಕ ಅಶೋಕ ಪಟ್ಟಣ, ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಪಿರೋಜ್ ಸೇಠ ಸೇರಿದಂತೆ ಬಹುತೇಕ ನಾಯಕರು ಕೆಪಿಸಿಸಿ ಹಾಗೂ ಎಐಸಿಸಿ ವಿರುದ್ಧ ಕಣ್ಣು ಕೆಂಪಾಗಿಸಿಕೊಂಡಿದ್ದಾರೆ
loading...