ಕಳ್ಳತನ ಮಾಡಿತ್ತಿದ್ದ ಏಳು ಜನ ಸೆರೆ

0
51
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಏಳು ಜನರನ್ನು ಎಪಿಎಂಸಿ ಪೊಲೀಸ್‍ರು ಕಾರ್ಯಾಚರಣೆ ನಡೆಸಿ ಮಂಗಳವಾರ ವಶಕ್ಕೆ ಪಡದಿದ್ದಾರೆ.
ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಅಜಂ ನಗರದ ಸಿಕಂದರ ಇಮ್ತಿಯಾಜ ಶಹಾಪೂರ (20), ಮಹಮ್ಮದ್ ಜಿಯಾಜಹೀರ್ ಮಂಗಲವಾಡ (19), ಅಹ್ಮದ್ ನಿಜಾಮ ಜಮಾದಾರ (20), ಫೈಸಲ್ ರಫಿಕ್ ಶೇಖ (19), ಜಹೀದ್ ಮೆಹಬೂಬ ಮನಿಯಾರ್ (20), ಭೋವಿ ಗಲ್ಲಿಯ ಸೈಫುಲ್ಲಾ ಫೈಬಲ್ಲಾ ಬಾರಗೇರ (20) ಮತ್ತು ಜ್ಯೋತಿ ನಗರದ ಯುನೂಸ್ ಬಾದಕಾ ಮುಲ್ಲಾ (21) ಎಂಬಾತರನ್ನು ಎಪಿಎಂಸಿ ಠಾಣೆಯ ಪಿಎಸ್‍ಐ ಜಿ.ಎಮ್ ಕಾಲಮಿರ್ಜಿ ಸಿಬ್ಬಂದಿಗಳಾದ ಎಮ್.ಬಿ ಕೊಂಕನ್ಯಾಗೋಳ, ಶಂಕರ ಕುಗಟೋಳಿ, ನಾಗರಾಜ ಭೀಮಗೋಳ, ತುಕಾರಾಮ ದೊಡ್ಡಮನಿ, ಕೆಂಪಣ್ಣಾ ಗೌರಾಣಿ, ಜಗನ್ನಾಥ ಭೋಸಲೆ, ಶಾಂತಿನಾಥ ಗೌರಾಜ ಮತ್ತು ಕೇದಾರಿ ಪಾಟೀಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ 7 ಲಕ್ಷ ಮೌಲ್ಯದ 250 ಗ್ರಾಂ ಚಿನ್ನದ ಆಭರಣಗಳು ಹಾಗೂ 1.60 ಲಕ್ಷದ ಮೌಲ್ಯದ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...