loading...

ಗೋಕಾಕ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರ್ಡಿ (ಕಾಯ್ದಿಟ್ಟ) ಕ್ಷೇತ್ರದಿಂದ ತಾವು ಸ್ಪರ್ಧಿಸುವದು ಖಚಿತ ಎಂದು ಯುವ ಕಾಂಗ್ರೆಸ ಮುಖಂಡ ಲಖನ್ ಜಾರಕಿಹೊಳಿ ಶನಿವಾರದಂದು ಸಂಜೆ ಪುನರುಚ್ಚಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ತಾವು ಕಾಂಗ್ರೆಸ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಾವು ಕಾಂಗ್ರೆಸ ಪಕ್ಷದ ಸದಸ್ಯರಾಗಿದ್ದು ಮತ್ತು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿರುವದು ಜಗಜ್ಜಾಹೀರ ಇರುವಾಗ ಕಾಂಗ್ರೆಸ ಸದಸ್ಯತ್ವ ಇಲ್ಲವೆನ್ನುವದು ಹಾಸ್ಯಾಸ್ಪದ. ಅಲ್ಲದೆ ಇದು ಜನರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ ಎಂದಿದ್ದಾರೆ.
ಅದಕ್ಕಾಗಿ ಯಮಕನಮರ್ಡಿ ಕ್ಷೇತ್ರದ ಜನತೆ ಇಂಥ ಹೇಳಿಕೆಗಳಿಗೆ ಕಿವಿಗೊಡಬಾರದೆಂದು ಲಖನ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

loading...