ಕಿರಣ ಠಾಕೂರಗೆ ಸವಾಲ್ ಹಾಕಿದ ಚಂದರಗಿ

0
314
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:22 ಕಿರಣ ಠಾಕೂರ್ ಕೀಳು‌ ರಾಜಕಾರಣ ಬಿಡಬೇಕು.‌ ಐಎಎಸ್ ಅಧಿಕಾರಿಗಳೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ರಾಜಕೀಯ ಪ್ರೇರೆಪಿಸಿ ಮಾತನಾಡುತ್ತಿದ್ದಾರೆ ಮುಂಬರುವ ಚುನಾವಣೆಯಲ್ಲಿ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ ಅವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಿ‌ ಅವರ ಅಹಂಕಾರ ಮಟ್ಟಹಾಕುತಗತೇವೆ ಎಂದು ಕನ್ನಡ ಸಂಘಟನೆಯ ಮುಖಂಡ ಅಶೋಕ ಚಂದರಗಿ ಇಂದಿಲ್ಲಿ ಸವಾಲ್ ಹಾಕಿದರು.
ಅವರು ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಕನ್ನಡ ಸಂಘಟನೆಗಳ ಸಭೆಯ ಅಧ್ಯಕ್ಷತೆ‌ ವಹಿಸಿ‌ ಮಾತನಾಡುತ್ತ, ಎಂಇಎಸ್ ನಾಯಕರು ಪ್ರತಿ ವಷ೯ ಪುಂಡಾಟಿಕೆ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಿರುವುದು ಹೊಸತಲ್ಲ. ಮರಾಠಿಯಲ್ಲಿ ಸರಕಾರಿ ದಾಖಲೆಗಳನ್ನು‌ನೀಡಬೇಕೆಂದು ಬೇಡಿಕೆ ಇಟ್ಟಿರುವುದು ರಾಜಕೀಯ ದುರುದೇಶವಾಗಿದೆ ಎಂದರು.
ಅನೇಕ ವಷ೯ಗಳಿಂದ ಜಿಲ್ಲಾಧಿಕಾರಿಗಳಿಗೆ ಹೇಳುತ್ತ ಬಂದಿದ್ದೇವೆ. ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ‌ ನೀಡಿದ ಸೌಲಭ್ಯ ಮಹಾರಾಷ್ಟ್ರದಲ್ಲೂ ಇಲ್ಲ. ಎಂಇಎಸ್ ನ ಕಿರಣ ಠಾಕೂರ್ ಡಿಸಿ‌ ಅವರ ಮೇಲೆ ಎರು‌ ಧ್ವನಿಯಲ್ಲಿ‌ ಮಾತನಾಡಿರುವುದನ್ನು ಕನ್ನಡ ಸಂಘಟನೆಗಳು ಖಂಡಿಸುತ್ತವೆ ಎಂದರು.ಸ

ಭೆಯಲ್ಲಿ ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ಅಶೋಕ ಚಂದರಗಿ, ರಾಘವೇಂದ್ರ ಜೋಶಿ, ರಾಜು ಕೋಲಾ, ಕಸ್ತೂರಿ ಬಾವಿ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...