ಕನ್ನಡಮ್ಮ ಸುದ್ದಿ-ಕುಡಚಿ 26: ಪಟ್ಟಣದಲ್ಲಿ ಸರಕಾರಿ ಕನ್ನಡ ಪ್ರೌಢ ಶಾಲೆಯನ್ನು ಪ್ರಾರಂಭಿಸಬೇಕೆಂದು ಕನ್ನಡ ಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕುಡಚಿ ಕಾರ್ಯಕರ್ತರು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣವು 45000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ವಿಧಾನ ಸಭಾ ಮತಕ್ಷೇತ್ರ ಹಾಗೂ ಪುರಸಭೆ ಹಾಗೂ ಗ್ರಾಮ ಪಂಚಾಯತ  ಇದ್ದರೂ ಕೂಡ ಇಲ್ಲಿಯವರೆಗೆ ಒಂದು ಸರಕಾರಿ ಕನ್ನಡ ಪ್ರೌಢ ಶಾಲೆಯನ್ನು ಹೊಂದಿಲ್ಲ. ಪಟ್ಟಣ ಹಾಗೂ ಗ್ರಾಮೀಣ ಸೇರಿ ಒಟ್ಟು 17 ಸರಕಾರಿ, ಅರೆ ಸರಕಾರಿ ಶಾಲೆಗಳನ್ನು ಸೇರಿ 7ನೇ ತರಗತಿಯಲ್ಲಿ 278 ಹೆಣ್ಣು ಹಾಗೂ 265 ಗಂಡು ಸೇರಿ ಒಟ್ಟು 543 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಪ್ರೌಢ ಶಾಲೆಗಳಿಗೆ ಹೆಚ್ಚಿನ ಶುಲ್ಕ ಕೊಡಲು ಆಗದೇ ಇರುವುದರಿಂದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಈಗಾಗಲೇ 2016ರಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಿದ್ದು ಪ್ರಸಕ್ತ ಸಾಲಿನಲ್ಲಿ 9ನೇ ತರಗತಿಯನ್ನು ಮುಂದುವರೆಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು,ಚಿಕ್ಕೋಡಿ ಉಪನಿರ್ದೇಶಕರಿಂದ ಪ್ರಸ್ತಾವಣೆ ಪಡೆದಿದ್ದು ಗಡಿನಾಡಿನಲ್ಲಿರುವ ಈ ಶಾಲೆಗೆ ಪ್ರಾಶಸ್ತ್ಯ ನೀಡಿ ಸರಕಾರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಡಿಡಿಪಿಐ ಮನ್ನಿಕೇರಿ ಮಾತನಾಡಿ, ನಾಳೆ ಆಯುಕ್ತರ ಕಛೇರಿಯಲ್ಲಿ ಸಭೆಯಿದ್ದು ಅವರ ಜೊತೆ ಚರ್ಚಿಸಿ 9ನೇ ತರಗತಿಯನ್ನು ಪ್ರಾರಂಭಿಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
loading...