loading...

ನವದೆಹಲಿ:-ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಭೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಅವರು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ರೂ.2 ಕೋಟಿ ಲಂಚವನ್ನು ನೀಡಿದ್ದರು ಎಂದು ಕಪಿಲ್ ಮಿಶ್ರಾ ಭಾನುವಾರ ಆರೋಪಿಸಿದ್ದಾರೆ. ಈ ಕುರಿತು ಪಕ್ಷದಲ್ಲಿ ಕೊಲಾಹಲ ಉಂಟಾಗಿದ್ದು, ಈ ಆರೋಪ ಸುಳ್ಳು ಎಂದು ಪಕ್ಷದ ನಾಯಕರು ತಳ್ಳಿ ಹಾಕಿದ್ದಾರೆ. ಆರೋಪವೊಂದು ಆಧಾರ ರಹಿತವಾದದ್ದು, ಉತ್ತರ ನೀಡುವಂತಹ ವಿಷಯವಲ್ಲ. ಇಂತಹ ಆರೋಪವನ್ನು ಯಾರೂ ನಂಬುವುದೂ ಇಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಒಂದಲ್ಲಾಒಂದು ಕಾರಣದಿಂದ ಆದ್ಮಿ ಮುಖ್ಯಸ್ಥ ಸುದ್ದಿಯಲ್ಲಿದ್ದಾರೆ. ಕೆಲವೊಂದು ಕಡೆ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾತುಗಳು ಕೂಡಾ ಕೇಳಿ ಬಂದಿವೆ.

loading...