ಖಾನಾಪೂರದಲ್ಲಿ ಆನೆ ಗಣತಿಯ ಕಾರ್ಯ ಇಂದು ಅಂತ್ಯ

0
63
loading...

ಆನೆ ಗಣಿತಿಯನ್ನು 5 ದಿನದಲ್ಲಿ ಮೂರು ವಿಧಾನ ಬಳಸಿ ಅಂಕಿ ಸಂಖ್ಯೆ ಸಂಗ್ರಹ
| ಕೆ ಎಮ್. ಪಾಟೀಲ
ಬೆಳಗಾವಿ: ದಕ್ಷಿಣ ಭಾರತ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮತ್ತು ಅಂಡಮಾನ ನೀಕೊಬಾರ್‍ನಲ್ಲಿ ಏಕ ಕಾಲದಲ್ಲಿಯೇ ಆನೆ ಗಣತಿಯನ್ನು 15 ರಿಂದ ಇಂದಿನವರೆಗೂ ಮಾಡಲಾಗುತ್ತಿದ್ದು, ವಿವಿಧ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಸರ್ಕಾರವೆ ಮಾದರಿಯಾಗಿದೆ.
ಅದೇ ರೀತಿಯಾಗಿ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಖಾನಾಪೂರ ಮತ್ತು ಬೆಳಗಾವಿ ತಾಲೂಕಿನಲ್ಲಿ ವಿಸ್ತøತವಾಗಿ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಇರುವ ಆನೆಗಳು ಗಣತಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಆನೆಗಳು ಇರುವ ಪ್ರದೇಶವನ್ನು ಗುರುತಿಸಿ ಅವುಗಳು ಎಲ್ಲಿ ಹೆಚ್ಚಾಗಿ ಓಡಾಡುತ್ತವೆ ಎಂಬುದನ್ನು ತಿಳಿದು ಅಧಿಕರಿಗಳು ಆ ಪ್ರದೇಶದಲ್ಲಿ ಗಣತಿಯನ್ನು ಮಾಡುತ್ತಾರೆ. ದಾಂಡೇಲಿಯಿಂದ ಗೊಲಿಹಳ್ಳಿ, ನಾಗರಗಾಳಿ, ಲೋಂಡಾ, ಖಾನಾಪೂರ, ಕಣಕುಂಬಿ ಮಾರ್ಗವಾಗಿ ಗೋವಾ ಮತ್ತು ಮಹರಾಷ್ಟ್ರ ರಾಜ್ಯಕ್ಕೆ ಆನೆಗಳ ಚಲನವಲನ ಇರುತ್ತವೆ ಅಂತಹುಗಳು ಈ ಮಾರ್ಗವಾಗಿ ಓಡಾಡುವುದರಿಂದ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತವೆ ಎಂದು ಡಿಎಪ್‍ಒ ಬಸವರಾಜ ಪಾಟೀಲ ಕನ್ನಡಮ್ಮಗೆ ತಿಳಿಸಿದರು.
ಸೆಪ್ಟಂಬರ್ –ಮಾರ್ಚ್ ತಿಂಗಳವರೆಗೆ ಆನೆಗಳು ಭೂಮಿಯಲ್ಲಿ ಬಿತ್ತಿರುವ ಭತ್ತ, ಕಬ್ಬುಗಳನ್ನು ತಿನ್ನಲು ಈ ಸಮಯದಲ್ಲಿ ಬರುತ್ತವೆ ಈ ಬೆಳೆಗಳು ಮುಗಿದ ನಂತರ ಅವುಗಳು ದಾಂಡೇಲಿಯಲ್ಲಿ ಬೀಡು ಬಿಡುತ್ತವೆ ಕಾರಣ ದಾಂಡೇಯನ್ನು ಆನೆಗಳ ತವರು ಎಂದು ಕರೆಯುತ್ತಾರೆ. ದಾಂಡೇಲಿಯಲ್ಲಿ ಆನೆಗಳಿಗೆ ತಿನ್ನಲು ಬಿದುರು ಸೀಗುವುದರಿಂದ ಆನೆಯ ಪ್ರಮುಖ ಆಹಾರ ಬಿದುರಾಗಿದ್ದು ಹಾಗಾಗಿ ಆನೆಗಳು ಹೆಚ್ಚಿನ ಸಮಯ ಅಲ್ಲಿಯೇ ಕಳೆಯುತ್ತಿವೆ.
ಯಾರಿಂದ ಆನೆ ಗಣತಿ: ಆನೆ ಗಣತಿಯ ನೂಡಲ್ ಅಧಿಕಾರಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಭಿವೃದ್ಧಿ ಬೆಂಗಳೂರು, ಪುನಾಟಿ ಶ್ರೀಧರ ಬೆಳಗಾವಿ ಸಿಸಿಎಫ್ ಕೃಷ್ಣಾ ಉದುಕುಡಿ, ಡಿಎಫ್‍ಒ ಬಿ ವಿ. ಪಾಟೀಲ ಇವರ ನೇತೃತ್ವದಲ್ಲಿ 48 ಉಪ ವಲಯ ಅರಣ್ಯ ಅಧಿಕಾರಿಗಳು, 150 ಮೇಲಾಧಿಕಾರಿಗಳು ನೇತೃತ್ವದಲ್ಲಿ 4 ನಾಲ್ಕು ಜನ ಸ್ವಯಂ ಸೇವಕರು, 2 ಜನ ಸಂಪನ್ಮೂಲ ವ್ಯಕ್ತಿಗಳು ಸೇರಿ ಆನೆ ಗಣಿತಿಯ ಕಾರ್ಯವನ್ನು 5 ದಿನಗಳ ಕಾಲ ಮಾಡುತ್ತಾರೆ.
ಅಧಿಕಾರಿಗಳಿಗೆ ಒಂದು ದಿನ ತರಬೇತಿ: ಆನೆ ಗಣತಿ ಮಾಡಲು ಅಧಿಕಾರಿಗಳಿಗೆ ಒಂದು ದಿನ ದಾಂಡೇಲಿಯ ಕುಳಗಿ ನೇಚರ್ ಕ್ಯಾಂಪ್‍ನಲ್ಲಿ ಮತ್ತು ಬೆಳಗಾವಿ ವಿಭಾಗ ಕಚೇರಿಯಲ್ಲಿ ಗಣಿತಿಯನ್ನು ಯಾವ ರೀತಿಯಾಗಿ ಮಾಡಬೇಕು. ಆನೆಗಳು ಯಾವ ಸಮಯದಲ್ಲಿ ಬರುತ್ತವೆ ಅವುಗಳ ಚಲನವಲನವನ್ನು ಯಾವ ರೀತಿಯಾಗಿ ಪರಿಕ್ಷೀಸಬೇಕು. ಬೆಳಗಿನ ಜಾವದಲ್ಲಿ ಹೇಗೆ ಹುಡಕಬೇಕು ಎಂಬ ಮಾಹಿತಿಯನ್ನು ಪ್ರಾಜಕ್ಟರ್ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಆನೆಗಳನ್ನು ಕಂಡು ಹಿಡಿಯುವ ಮೂರು ವಿಧಾನಗಳು: 1. ಬ್ಲಾಕ್ ಕೌಂಟ್ ಅಂದರೆ, ಆನೆ ಬಂದು ಹೋಗಿರುವ ಸ್ಥಳದಲ್ಲಿ ಅವಿತು ಕುಳಿತು ಅವುಗಳ ಚಿತ್ರಣವನ್ನು ಕ್ಯಾಮರಾದಲ್ಲಿ ಸೇರೆಹಿಡಿಯುವುದು. 2. ವಾಟರ್ ಹೋಲ್ ಕೌಂಟ್ ಅಂದರೆ, ಆನೆಗಳು ನೀರನ್ನು ಕುಡಿಯಲು ಕೆರೆಗೆ ಬಂದಿರುವ ಸಮಯದಲ್ಲಿ ಗುರುತಿಸುವುದು. 3. ಡಂಗ್ ಕೌಟ್ ಅಂದರೆ, ಆನೆಗಳು ಅಲೆದಾಡಿ ಲದ್ದಿಯನ್ನು ಹಾಕಿರುತ್ತವೆ ಅವುಗಳ ಪ್ರಕಾರವಾಗಿ ಟ್ರಾಂಜಾಕ್ಟ್ ಲೈನ್ (2 ಕಿಮೀ ಉದ್ದ ಲೈನ್ ಹಾಕಿ ಆನೆಗಳನ್ನು ಗುರುತಿಸಲಾಗುತ್ತದೆ ಅಲ್ಲದೇ ಆನೆಗಳು ಲದ್ದಿಯ ಪ್ರಮಾಣದಲ್ಲಿ ಆನೆಯ ವಯಸ್ಸನ್ನು ಕಂಡು ಹಿಡಿಯಲಾಗುತ್ತದೆ) ಈ ಮೂರು ವಿದಾನಗಳನ್ನು ಬಳಸಿ ಆನೆ ಗಣತಿಯನ್ನು ಮಾಡಲಾಗುತ್ತದೆ.
ಬಾಕ್ಸ್
ಆನೆ ಗಣಿತಿಯನ್ನು ಐದು ವರ್ಷಕ್ಕೊಮ್ಮೆ ಮಾಡಲಾಗುತ್ತಿದ್ದು ಆನೆಯ ಗಣಿತಿಯನ್ನು ಅತೀ ಜಾನ್ಮೆಯಿಂದ ಮಾಡಲಾಗುತ್ತಿದ್ದ ಆನೆಯ ಗಣತಿಯನ್ನು ಮಾಡಬೇಕಾದರೆ ಬ್ಲಾಕ್ ಕೌಂಟ್, ವಾಟರ್ ಕೌಂಟ್, ಟ್ರಾನ್ಸಿಟ್ ಲೈನ್ ಮೂರು ವಿಧಾನಗಳಿಂದ ಆನೆಗಳ ಗಣತಿಯನ್ನು ಮಾಡಲಾಗುತ್ತಿದೆ.
-ಬಸವರಾಜ ಪಾಟೀಲ. ಡಿಎಫ್‍ಒ ಬೆಳಗಾವಿ

loading...