loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಹೆಣ್ಣು ಮಕ್ಕಳು ಗರ್ಭ ಧರಿಸುವಿಕೆ, ಅವರ ಸಂರಕ್ಷಣೆ, ತಾಯಿ ಮತ್ತು ಮಕ್ಕಳ ಮರಣದ ಸಂಖ್ಯೆ ಕುರಿತಾದ ಕಾರ್ಯಾಗಾರವನ್ನು ನಗರದ ಕಿಮ್ಸ ಹಾಗೂ ನಗರದ ಖಾಸಗಿ ಹೊಟೆಲ್ಲಿನಲ್ಲಿ ಇದೇ ದಿ. 12 ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಎಂದು ಸ್ತ್ರೀ ರೋಗ ಹಾಗೂ ಪ್ರಸೂತಿ ಒಕ್ಕೂಟದ ಅದ್ಯಕ್ಷ ಡಾ. ಎಂ ಜಿ ಹಿರೆಮಠ ಹೇಳಿದರು.
ನಗರದ ಪತ್ರ ಕರ್ತರ ಭವನದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ಗರ್ಭೀಣಿಯರಲ್ಲಿ ವಿವಿಧ ಕಾಯಿಲೆಗಳಿಂದ ಮರಣ ಹೆಚ್ಚಾಗುತ್ತಿದೆ. ಈ ಕಾರ್ಯಾಗಾರಕ್ಕೆ ದೇಶದ ವಿವಿಧ ರಾಜ್ಯಗಳಿಂದ ನುರಿತ ವೈದ್ಯರು ಆಗಮಿಸುತ್ತಾರೆ ಎಂದರು. ಮೇ 12 ರಿಂದ ಕಿಮ್ಸ ಆಡಿಟೋರಿಯಮ್ಮಿನಲ್ಲಿ ನಂತರ ಮೇ 13-14 ರಂದು ಭ್ರೂಣ ಸಂರಕ್ಷಣೆ, ಭ್ರೂಣ ಹತ್ಯೆ, ಗರ್ಭಿಣಿಯರ ಆರೋಗ್ಯ ಕಾಪಾಡುವಿಕೆ , ತಾಯಿ ಮಗೂವಿಗೆ ಆರೋಗ್ಯ ತಿಳುವಳಿಕೆ ಕಾರ್ಯಕ್ರಮ ನಗರದ ಗೋಕುಲ ರಸ್ತೆಯ ಡೆನಿಸನ್ ಹೊಟೆಲ್ಲಿನಲ್ಲಿ ನಡೆಯಲಿವೆ ಎಂದು ಅವರು ಹೇಳಿದರು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ 20 ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದು ಮೇ 14 ರಂದು ಮೇ 14 ರಂದು ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಕುರಿತು ವೈದ್ಯಕೀಯ ಕಾನೂನು ಕುರಿತು ಸುದೀರ್ಘ ಕಾನೂನು ಕುರಿತು ಪಂಡಿತರು , ವೈದ್ಯರು ಹಾಗೂ ವಿವಿಧ ಕಾನೂನು ಕುರಿತು ಎಲ್ಲರಂಗದ ಪರಿಣಿತರಿಂದ ಮಾಹಿತಿ ಕಾರ್ಯಾಗಾರ ಸಹ ನಡೆಯಲಿದೆ. ಎಂದು ಅವರು ಹೇಳಿದರು.
ವೈದ್ಯರಾದ ಡಾ. ರಾಮಲಿಂಗಪ್ಪ, ಡಾ. ಬಸವರಾಜ ಸಜ್ಜನ, ಡಾ.ಶೋಭಾ ಬೆಂಬಳಗಿ, ಡಾ. ಕಸ್ತೂರಿ ಢೋಣಿಮಠ, ಡಾ. ಸನೀತಾ ಟಿಎಚ್ ಡಾ. ಆಶಾ ನೆರವಿ, ಡಾ. ರತ್ನಮಾಲಾ ದೇಸಾಯಿ ಉಪಸ್ಥಿತರಿದ್ದರು.

loading...