ಖಾನಾಪುರ: ತಾಲೂಕಿನ ಗುಂಜಿ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಗ್ರಾಪಂ ಕಚೇರಿಯ ಮುಂದೆ ಸೋಮವಾರ ತಡರಾತ್ರಿಯವರೆಗೂ ರಾಷ್ಟ್ರಧ್ವಜ ಹಾರಾಟ ನಡೆಸಿದ್ದು, ಈ ಘಟನೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ವಿವಿಧ ಸಂಘಟನೆಗಳು ಮಂಗಳವಾರ ತಹಸೀಲ್ದಾರ್, ತಾಪಂ ಇಒ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಪಂಕಜ ಕುಟ್ರೆ, ಪಂಕಜ ಸಾವಂತ, ಅಮೋಲ ಬೆಳಗಾಂವಕರ, ಕಲ್ಲಪ್ಪ ಬಿರ್ಜೆ, ತಾನಾಜಿ ಗೋರಲ್, ಸಂಜಯ ಮಾದರ ಹಾಗೂ ಇತರರು ಆಗ್ರಹಿಸಿದರು.
loading...