ಗೋವಾದಲ್ಲಿ ಕುರ್ಚೊರೆಮ್ ಸೇತುವೆ ಕುಸಿದು 50 ಜನ ನೀರುಪಾಲು

0
64
 ಕನ್ನಡಮ್ಮ ಸುದ್ದಿ-ಬೆಳಗಾವಿ: ದಕ್ಷಿಣ ಗೋವಾದ ಕುರ್ಚೊರೆಮ್ ಸೇತುವೆ ಕುಸಿದು ನಿಂತಿದ್ದ ಸುಮಾರು 50 ಜನರು ನೀರುಪಾಲಾದ ಘಟನೆ ಗುರುವಾರ ಸಂಜೆಯ ವೇಳೆ ನಡೆದಿದೆ. ನೀರು ಪಾಲಾದದವರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿದ್ದ ಸಾಗಿದೆ.
ಪೆÇೀರ್ಚುಗೀಸರ ಕಾಲಕ್ಕಿಂತಲೂ ಹಿಂದಿನಷ್ಟು ಪುರಾತನವಾದ ಕುರ್ಚೊರೆಮ್ ಸೇತುವೆ ಇದಾಗಿದ್ದು, ಸನವೊರ್ಡೆಮ್ ನದಿಗೆ ಇದನ್ನು ಕಟ್ಟಲಾಗಿತ್ತು. ಈ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನ ರಕ್ಷಣೆಗಾಗಿ ತುರ್ತುಸೇವೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದ ವೇಳೆ ಶಿಥಿಲಗೊಂಡ ಈ ಸೇತುವೆ ಮುರಿದು ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
 ಸಂಜೆ 6.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಜನ ಈ ರಕ್ಷಣಾ ಕಾರ್ಯಚರಣೆಯನ್ನು ನೋಡಲು ಈ ಕಾಲು ಸೇತುವೆ ಮೇಲೆ ಗುಂಪಾಗಿ ನಿಂತಿದ್ದಾಗ ಅವಘಡ ನಡೆದಿದೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ವೇಳೆ ಕೆಲವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಉಳಿದವರ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರೆದಿದೆ.
ಕಳೆದ ವರ್ಷ ಮುಂಬೈ ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತಗೊಂಡು ಹಲವರು ಪ್ರಾಣ ಕಳೆದುಕೊಂಡಿದ್ದರು. ಇದು ಕೂಡ ಬ್ರಿಟೀಷರ ಕಾಲದ ಸೇತುವೆಯಗಿತ್ತು.
loading...