ಗೋಸಬಾಳ ಮಾರುತಿ ದೇವರ ಓಕುಳಿ

0
42
loading...

ಬೆಟಗೇರಿ: ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಶ್ರೀ ಮಾರುತಿ ದೇವರ ಓಕುಳಿ ಇದೇ ಶನಿವಾರ ಮೇ 6ರಿಂದ ಸೋಮವಾರ ಮೇ 8 ರವರೆಗೆ ಜರುಗಲಿದೆ.
ಶನಿವಾರ ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಮತ್ತು ಕುಂಕುಮ ಪೂಜೆ ಕಾರ್ಯಕ್ರಮ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ ನಡೆಯಲಿದೆ.
ರವಿವಾರ ಮುಂಜಾನೆ 7ಗಂ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ನಂತರ ಸಾಯಂಕಾಲ 5 ಗಂಟೆಗೆ ನಡುಓಕುಳಿ ನಡೆಯಲಿದೆ.
ಸೋಮವಾರ ಮುಂಜಾನೆ 6ಗಂ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ನಂತರ ವಿವಿಧ ಗ್ರಾಮಗಳಿಂದ ಶ್ರೀ ಪಲ್ಲಕ್ಕಿಗಳ ಆಗಮನ, ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ ಅರ್ಪಣೆ ನಡೆದು, ಸಾಯಂಕಾಲ 5 ಗಂಟೆಗೆ ಓಕಳಿ ಕೊಂಡಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಪಲ್ಲಕ್ಕಿ ಪ್ರದಕ್ಷೀಣೆ ನಡೆದು, ನಂತರ ಕಡೆಓಕಳಿ ನಡೆಯಲಿದೆ. ಅದೇ ದಿನ ರಾತ್ರಿ 10-30 ಕ್ಕೆ ಸ್ಥಳೀಯ ಜೈ ಶ್ರೀ ರಾಮ ಯುವ ನಾಟ್ಯ ಸಂಘದವರಿಂದ `ದೇಸಾಯಿ ದರ್ಪಕ್ಕೆ ಅಂತ್ಯ ಹಾಡಿದ ಸಹೋದರರು’ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ಇಲ್ಲಿಯ ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶಿವಾನಂದ ಬುಳ್ಳಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

loading...