ಕನ್ನಡಮ್ಮ ಸುದ್ದಿ-ಅರಟಾಳ : ಗ್ರಾಮೀಣ ಪ್ರದೇಶದ ಮಕ್ಕಳು ಪರೀಕ್ಷೆಯಲ್ಲಿ ನಗರ ಪ್ರದೇಶ ಮಕ್ಕಳಿಗಿಂತ ಮುಂದಿದ್ದಾರೆ, ಸಾಧಕರಾದವರು ಸಹ ಗ್ರಾಮೀಣ ಪ್ರದೇಶದಿಂದಲೇ ಹೆಚ್ಚು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲದ ಸ್ನಾತಕೋತ್ತರ ಇತಿಹಾಸ ವಿಭಾಗದ ಪ್ರೋ ಎಂ ಎಸ್ ಮುಜಾವರ ಹೇಳಿದರು.
ಸ್ಥಳೀಯ ಜ್ಞಾನಜ್ಯೋತಿ ಟ್ಯೂಷನ ಕ್ಲಾಸಿಸ್‍ನ ಸಮಾರೋಪ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಬೆಳೆಯುವ ಮಕ್ಕಳು ಆಟದೊಂದಿಗೆ ಪಾಠ ಕಲಿಯುವಂತಾಗಬೇಕು ಎಂದರು.
ಕೆಎಎಸ್ ಪರೀಕ್ಷೇಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಾಹಕ ಅಧಿಕಾರಿಯಾದ ಪ್ರಕಾಶ ವಡ್ಡರ ಮಾತನಾಡಿ, ಪ್ರತಿಯೋಬ್ಬ ಮಗುವು ಕಲಿಕೆಯನ್ನು ಇಷ್ಟಪಟ್ಟು ಮಾಡಬೇಕೆ ಹೊರತ್ತು, ಕಷ್ಟಪಟ್ಟು ಮಾಡುವುದಲ್ಲ ಅಂದಾಗ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿ ಬೇಸಿಗೆ ಶಿಬಿರದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತ್ತು, ವಚನ ಹಾಗೂ ರಸಪ್ರಶ್ನೇಯಲ್ಲಿ ಬಹುಮಾನ ವಿತರಿಸಲಾಯಿತ್ತು. ಪ್ರಾಸ್ತಾವಿಕವಾಗಿ ಕ್ಲಾಸನ ನಿರ್ದೆಶಕ ಸದಾನಂದ ಮಾಡಗ್ಯಾಳ ಮಾತನಾಡಿದರು. ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸಿದ್ಧಾರೂಢ ಆಶ್ರಮದ ಶಿವಪುತ್ರ ಶಿವಯೋಗಿಗಳು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಗ್ರಾಪಂ ಉಪಾದ್ಯಕ್ಷ ರಾಮಪ್ಪ ಭಂಡಾರಿ, ಪ್ರೋ ಬಿ ಡಿ ಹಡಪದ, ತಾಪಂ ಸದಸ್ಯ ಶಿವಪ್ಪ ಹಟ್ಟಿ, ರಾಮಪ್ಪ ಪೂಜಾರಿ, ಮಲ್ಲಿಕಾರ್ಜುನ ಜಂಬಗಿ, ಶಿಕ್ಷಕ ರಾಮಪ್ಪಾ ಪೂಜಾರಿ, ಉಪನ್ಯಾಸಕ ಎಚ್ ಆರ್ ಪಾಟೀಲ, ಸಿ ಎಚ್ ಬಿರಾದರ, ಗ್ರಾಪಂ ಸದಸ್ಯರಾದ ಮಾಳಪ್ಪ ಕಾಂಬಳೆ, ಶ್ರೀಶೈಲ ಮಾಳಿ, ಹಣಮಂತ ಪೂಜಾರಿ, ರಮೇಶ ಜಾಧವ ಸೇರಿದಂತೆ ಪಾಲಕರು ಗ್ರಾಮಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು  ಶಿಲ್ಪಾ ಪೂಜಾರಿ ಹಾಗೂ ಶಿಕ್ಷಕ ಅಕ್ಬರಅಲಿ ಮುಲ್ಲಾ ನಿರೂಪಿಸಿ, ಕ್ಲಾಸನ ಸಂಚಾಲಕ ಎಸ್ ಎಚ್ ಕೊರಬು ಸ್ವಾಗತಿಸಿ, ಶಿಕ್ಷಕ ರಾಜು ಕಾಂಬಳೆ ವಂದಿಸಿದರು.
loading...