loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರು: ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿಯ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸುವ ಹಾಗೂ ಕಿತ್ತೂರು ಚನ್ನಮ್ಮಾಜಿಯ ಕೋಟೆಯನ್ನು ಅಭಿವೃದ್ಧಿ ಪಡೆಸುವಂತೆ ಆಗ್ರಹಿಸಿ ಬೈಲಹೊಂಗಲದವರೆಗೆ ಪಂಚಮಸಾಲಿ ಸಮಾಜದ ವತಿಯಿಂದ ಶುಕ್ರವಾರ ಬೃಹತ್ತ ಬೈಕ್ ರ್ಯಾಲಿ ನಡೆಸಲಾಯಿತು. ಪಟ್ಟಣದ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಾಜಿ ಪ್ರತಿಮೆಗೆ ಪುಪ್ಪ ನಮನ ಸಲ್ಲಿಸುವದರ ಮುಖಾಂತರ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಕಿತ್ತೂರು ಕೋಟೆ ಹಾಗೂ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಬೇಕೆಂಬ ಕೂಗು ಹಲವು ಭಾರಿ ಕೇಳಿಬಂದಿದ್ದರೂ ಯಾವ ಸರ್ಕಾರವು ಇತ್ತ ಚಿತ್ತ ಹರಿಸದಿರುವುದು ವಿಷಾಧನೀಯ ಸಂಗತಿಯಾಗಿದೆ. ಈ ಕುರಿತು ಶನಿವಾರ ಪಂಚಮಸಾಲಿ ಸಮಾಜದ ಸಮಾವೇಶವನ್ನು ಹಮ್ಮಿಕೊಂಡಿದ್ದು ಸರ್ಕಾರದ ಚಿತ್ತವನ್ನು ಸೇಳೆಯುವ ಪ್ರಯತ್ನ ನಡೆಯಲಿದೆ ಎಂದರು. ಪ್ರಥಮ ಭಾರಿಗೆ ಪಟ್ಟಣದಲ್ಲಿ ಪಂಚಮಸಾಲಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಜನರಲ್ಲಿ ಜಾಗೃತಿ ಮೂಡಿಸಲು ಪಣ ತೊಟ್ಟಿದ್ದೆವೆ, ಪಂಚಮಸಾಲಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ, ಈ ಸಮಾಜಕ್ಕೆ ಸರ್ಕಾರ ಮಿಸಲಾತಿಯನ್ನು ನೀಡದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ, ಒಂದು ವೇಳೆ ಸರ್ಕಾರ ಮಿಸಲಾತಿ ನೀಡದಿದ್ದಲ್ಲಿ ಹೊರಾಟ ಅನಿವಾರ್ಯವಾಗಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಚಾಟಿ ಬಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡ್ರ ಮಾತನಾಡಿ, ದೇಶದಲ್ಲಿ ಬ್ರಿಟಿಷರಿಗೆ ಮೊಟ್ಟಮೂದಲು ಸೋಲಿನ ರುಚಿ ತೊರಿಸಿದ ಚನ್ನಮ್ಮಾಜಿಯನ್ನು ಸರ್ಕಾರ ನೀರ್ಲಕ್ಷಿಸುತ್ತಿದೆ, ಕಿತ್ತೂರಿಗೆ ಸಿಗಬೇಕಾದ ಸ್ಥಾನಮಾನವನ್ನು ಸರ್ಕಾರ ಕೂಡಲೇ ಒದಗಿಸುವ ಪ್ರಾಮಾಣಿಕ ಕೆಲಸವನ್ನು ಮಾಡುವ ಅವಶ್ಯಕತೆ ಇದೆ ಎಂದು ಹರಿಹಾಯ್ದರು, ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ್, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಡಿ.ಆರ್.ಪಾಟೀಲ್, ಬಿಜೆಪಿ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಬಸನಗೌಡ ಸಿದ್ರಾಮಣಿ, ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಆರ್. ಪಾಟೀಲ್, ನಿಂಗಪ್ಪ ಹಣಜಿ, ಎಪಿಎಂಸಿ ಅಧ್ಯಕ್ಷ ಸಂಗನಗೌಡ ಪಾಟೀಲ್, ನ್ಯಾಯವಾದಿ ಶಿವಾನಂದ ಬೊಗೂರ, ಪಪಂ ಉಪಾಧ್ಯಕ್ಷ ಕಿರಣ ಪಾಟೀಲ್, ಸದಸ್ಯ ಕಿರಣ ವಾಳದ, ರಾಣಿ ಶುಗರ್ಸ ನಿರ್ದೇಶಕ ಶಿವನಗೌಡ ಪಾಟೀಲ, ಚಂದ್ರಗೌಡ ಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು.

loading...