loading...

ಕನ್ನಡಮ್ಮ ಸುದ್ದಿ-ಧಾರವಾಡ : ಕೆಪಿಸಿಸಿ ಸದಸ್ಯ ಹಾಗೂ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಬಿಸ್ಕಟ್ ಹಾಗೂ ಬ್ರೆಡ್ ವಿತರಿಸಲಾಯಿತು.
ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ ಮಾತನಾಡಿ, ಕೆಪಿಸಿಸಿ ಸದಸ್ಯರಾಗಿರುವ ದೀಪಕ ಚಿಂಚೋರೆ ಅವರು ಯುವಕರ ಕಣ್ಮಣಿಯಾಗಿದ್ದು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ನಾಯಕರಾಗಿದ್ದಾರೆ. ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ದೊರೆಯುವುದು ಖಚಿತವಾಗಿದ್ದು, ಕ್ಷೇತ್ರದ ಎಲ್ಲ ಜನತೆ ಅವರನ್ನು ಶಾಸಕರಾಗಿ ಆಯ್ಕೆ ಮಾಡುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯ ಆನಂದ ಸಿಂಗನಾಥ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಆನಂದ ಜಾಧವ, ಕಾಂಗ್ರೆಸ್ ಮುಖಂಡ ವಸಂತ ಅರ್ಕಾಚಾರ, ಹೇಮಂತ ಗುರ್ಲಹೊಸೂರ ಉಪಸ್ಥಿತರಿದ್ದರು.

loading...