ಚಿಕ್ಕೋಡಿ ಎಡಿಎಚ್ಒ ಮುನ್ನಾಳ ಅಮಾನತು

0
783
loading...


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 04: ಅಧಿವೇಶನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಲ್ಲಿಸದ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕುಡಚಿ ಶಾಸಕ ಪಿ. ರಾಜೀವ್ ಅವರು ರಾಯಬಾಗ ತಾಲೂಕಿನ ಕುಡಚಿ ಮತ್ರಕ್ಷೇತ್ರದಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮತಕ್ಷೇತ್ರದಲ್ಲಿ ಜನಸಂಖ್ಯೆಗೆ ಈಗಿರುವ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿವೆಯೇ? ಎಂಬುದು ಸೇರಿದಂತೆ ಇನ್ನೀತರ ಪ್ರಶ್ನೆಗಳನ್ನು ವಿಧಾನಸಭೆಯಲ್ಲಿ ಕೇಳಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತಾಲಯಕ್ಕೆ ಚಿಕ್ಕೋಡಿ ಎಡಿಎಚ್ಒ ಮಾಹಿತಿ ಸಲ್ಲಿಸುವ ಸಂದರ್ಭದಲ್ಲಿ ಕೆಲ ಲೋಪಗಳನ್ನು ಎಸಗಿದ್ದರಿಂದ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಅಲ್ಲದೇ ಈ ಕುರಿತು ಮೂರು ದಿನಗಳೊಳಗಾಗಿ ಸಮರ್ಪಕ ಉತ್ತರ ನೀಡುವಂತೆ ಆಯುಕ್ತರು ನಿದರ್ೆಶನ ನೀಡಿದ್ದಾರೆ.
ಏಸಗಿರುವ ತಪ್ಪುಗಳು
1) ಉತ್ತರದಲ್ಲಿ ವಿಧಾನ ಸಭೆಯ ಸದಸ್ಯರನ್ನು ವಿಧಾನ ಪರಿಷತ್ ಸದಸ್ಯರೆಂದು ತಪ್ಪಾಗಿ ಉಲ್ಲೇಖಿಸಿರುವುದು.
2) ಕುಡಚಿ ಮತಕ್ಷೇತ್ರ ಆರೋಗ್ಯ ಕೇಂದ್ರ ಸಂಖ್ಯೆ ನೀಡುವ ಬದಲು ತಪ್ಪು ಮಾಹಿತಿ ವಗರ್ಾವಣೆ
3) ಮತಕ್ಷೇತ್ರಕ್ಕೆ ಅಗತ್ಯವಿರುವ ಪಿಎಚ್ಸಿಗಳ ಸಂಖ್ಯೆ ಬದಲು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವಣೆ ಸಲ್ಲಿಕೆ
4) ಆರೋಗ್ಯ ಸಹಾಯಕಿ ಅಮಾನತಿನಲ್ಲಿ ಕಾಯ್ದೆ ಉಲ್ಲಂಘನೆ

loading...