ಜನತಾ ಪರಿವಾರದ ನಾಯಕರು ಮರಳಿ ಗೂಡಿಗೆ: ಕುಮಾರಸ್ವಾಮಿ

0
709
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:11 ಜೆಡಿಎಸ್ ಪಕ್ಷವನ್ನು ಸ್ವತಃ ಮುಖ್ಯಮಂತ್ರಿಗಳೇ ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಕೆಲ ಯಶಸ್ವಿ ಕಂಡರೂ ಅದು ಅವರಿಗೆ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಇಂದಿಲ್ಲಿ ಹೇಳಿದರು.
ಅವರು ಗುರುವಾರ ನಗರದ ಹೊರ ವಲಯದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಮೂಲ ಜನತಾ ದಳದ ಪಕ್ಷದಲ್ಲಿ ಇದ್ದು ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನು ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕಂಡರೂ ಅದು ಪ್ರಯೋಜನವಾಗುವುದಿಲ್ಲ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತೇವೆ ಎಂದು ನಾಲ್ಕು ವರ್ಷಗಳ ಹಿಂದೆ ರಾಜ್ಯದ ಜನತೆಗೆ ಮಾತು ನೀಡಿದ್ದರು. ಆದರೆ ಈಗ ಭ್ರಷ್ಟಾಚಾರದಲ್ಲಿ ನಂಬರ 1 ಸ್ಥಾನದಲ್ಲಿದೆ ಎಂದು ದೇಶದ ತುಂಬ ಮಾತಾಗಿದೆ. ಇಂಥ ಸರಕಾರದ ಮೇಲೆ ಜನತೆ ಯಾವ ನಂಬಿಕೆ ಇಟ್ಟುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಹೈದ್ರಾಬಾದ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಮಾಜಿ ಶಾಸಕರುಗಳು ಗೆಲುವು ಸಾಧಿಸಬೇಕೆಂಬ ನಿರಂತರ ಪ್ರವಾಸ ನಡೆಸಿದ್ದೇನೆ. ಇಂದಿನಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದೇನೆ. ನಮ್ಮಲ್ಲಿ ಕಾರ್ಯಕರ್ತರು ತುಂಬಾ ಜನರು ಇದ್ದಾರೆ. ಆದರೆ ನಾಯಕತ್ವದ ಕೊರತೆ ಇದೆ. ಆದ್ದರಿಂದ ಯಾವುದೇ ಪಕ್ಷದ ನಾಯಕರು. ಅಂದರೇ ಆ ನಾಯಕನಿಂದ ನಮ್ಮ ಪಕ್ಷ ಬಲಿಷ್ಠವಾಗುತ್ತದೆ ಎಂದರೆ ಅಂಥ ನಾಯಕರಿಗೆ ಜೆಡಿಎಸ್‍ಗೆ ಸ್ವಾಗತವಿದೆ ಎಂದರು.
ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಹುಕ್ಕೇರಿ ಶಾಸಕ ಉಮೇಶ ಕತ್ತಿ ಜೆಡಿಎಸ್ ಪಕ್ಷಕ್ಕೆ ಬರುತ್ತಾರೆ ಎಂಬ ಯಾವುದೇ ಚರ್ಚೆ ಮಾಡಿಲ್ಲ. ತಕ್ಕ ಮಟ್ಟಿಗೆ ಆ ವಿಷಯಗಳ ಕುರಿತು ಯಾವುದೇ ಚಿಂತನೆ ನಡೆದಿಲ್ಲ. ಮುಂದಿನ ದಿನದಲ್ಲಿ ಮಾತುಕತೆ ಬಂದರೇ ನಾವು ಸಿದ್ಧರಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ನಿರೀಕ್ಷೆಯ ಮಟ್ಟದಲಾದರೂ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಭವಿಷ್ಯ ನುಡಿದರು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಜನತಾ ಪರಿವಾರವನ್ನು ಗಟ್ಟಿಗೊಳ್ಳಿಸುವ ಕಾರ್ಯವನ್ನು ಮಾಡುತ್ತೇವೆ. ದೇವಗೌಡರ ಗರಡಿಯಲ್ಲಿ ಪಳಗಿದವರೇ ರಾಜ್ಯದ ಆಡಳಿತವನ್ನು ನಡೆಸುತ್ತಿದ್ದಾರೆ. ಮುಂದೆಯೋ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

loading...