ಜಿಲ್ಲಾಧಿಕಾರಿಗಳ ಆವರಣದಲ್ಲಿ ಅಂದಾದುಂದಿ ಪಾರ್ಕಿಂಗ್ ! ಖಾಸಗಿ ವಾಹನಗಳ ದರ್ಬಾರ್ – ಹೇಳೋರು ಇಲ್ಲ ಕೇಳೋರು ಇಲ್ಲ..

0
2264
loading...

 

 

 

ಸುಧಾ ಪಾಟೀಲ
ಬೆಳಗಾವಿ:4 ಜಿಲ್ಲಾ ಕೇಂದ್ರ ಮತ್ತು ಜಿಲ್ಲಾಧಿಕಾರಿ ಕಚೇರಿ ಎಂದರೆ ಇಡೀ ಜಿಲ್ಲೆಗೆ ಒಂದು ಮುಕುಟವಿದ್ದಂತೆ, ಆದರೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಈ ವಿಷಯದಲ್ಲಿ ಸ್ವಲ್ಪ ವಿಫಲವಾಗಿರುವುದು ಅಂತೂ ಸತ್ಯದ ಮಾತು.
ಅರೇ ಇದೇನೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏನಾಗಿದೆ ಅಂದರೆ. ಇಡಿ ಜಿಲ್ಲೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ನೂರಾರು ಜನರು, ಸಮಸ್ಯೆಗಳನ್ನು ಹೊತ್ತು ಹಲವಾರು ಪ್ರತಿಭಟನಕಾರರು ಆಗಮಿಸುತ್ತಾರೆ. ಆದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲು ಸರಿಯಾದ ಸ್ಥಳದ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಾರ್ವಜನಿಕರು, ಜಿಲ್ಲಾಧಿಕಾರಿಗಳ ಕಚೇರಿಯ ಮುಂದುಗಡೆ ತಮಗೆ ಇಚ್ಚೆ ಬಂದ ಹಾಗೆ ನಿಲ್ಲಿಸಿ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣ ಅವ್ಯವಸ್ಥೆಯ ಆಗರವಾಗಿದೆ. ಬೇಕಾಬಿಟ್ಟಿ ಪಾರ್ಕಿಂಗ್ ಮಾಡಲಾಗಿದೆ. ಅಲ್ಲದೆ, ಕಾರು, ಬೈಕ್‍ಗಳನ್ನು ಎಲ್ಲಿಬೇಕೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತಿದೆ ಎಂಬುವುದು ಇಲ್ಲಿಗೆ ಬರುವ ಸಾರ್ವಜನಿಕರ ದೂರಾಗಿದೆ.
ಮೊದಲೇ ನಗರವು ಪಾರ್ಕಿಂಗ್ ಸಮಸ್ಯೆಯ ಸುಳಿಯಲ್ಲಿರುವುದು ಒಂದು ಕಡೆಯಾದರೆ. ಡಿಸಿ ಆವರಣಕ್ಕೆ ಪ್ರತಿದಿನ ಸಾವಿರಾರು ಜನರು ಬರುತ್ತಾರೆ ಅವರಿಗೂ ಕೂಡ ಪಾರ್ಕಿಂಗ್ ಸಮಸ್ಯೆಯ ಬಿಸಿ ತಟ್ಟಿರದೆ ಇರದು. ಜಿಲ್ಲಾಧಿಕಾರಿ ಆವರಣದಲ್ಲಿ ಹಲವಾರು ಕಚೇರಿಗಳು ಇಲ್ಲೆ ಇರುವುದುದರಿಂದ ವಿವಿಧ ಕಚೇರಿಗಳಿಲ್ಲಿ ಕೆಲಸ ಮಾಡುವ ನೌಕರರು, ಅಲ್ಲಿಗೆ ತಮ್ಮ ಸಮಸ್ಯೆಗಳನ್ನು ಕೇಳಲು ನೂರಾರು ಜನರು ಬರುತ್ತಾರೆ. ಇವರೇಲ್ಲ ಪ್ರತಿದಿನ ವಾಹನಗಳನ್ನು ನಿಲ್ಲಿಸಲು ಒಂದು ಸುಸಜೀತ ಪಾರ್ಕಿಂಗ್ ವ್ಯವಸ್ಥೆ ಬೇಕಗಿದೆ.
ಈ ನಿಟ್ಟಿನಲ್ಲಿ ವಾಹನವನ್ನು ಪಾರ್ಕ್ ಮಾಡಲು ಸರಿಯಾದ ಸ್ಥಳವನ್ನು ನಿಗದಿಯಾಗದೇ ಇರುವುದರಿಂದ ತಮಗೆ ಮನಸ್ಸಿಗೆ ತಿಳಿದ ಕಡೆ ವಾಹನಗಳನ್ನು ನಿಲ್ಲಿಸುತ್ತಾರೆ. ಬೆಳಗಾವಿ ನಗರವು ಸ್ಮಾರ್ಟ್ ಸಿಟಿಯಾಗುತ್ತಿದೆ ನಿಜ ಆದರೆ ಎಲ್ಲಾ ಕಾರ್ಯಲಯಾಗಳ ಕೇಂದ್ರಬಿಂದು ಜಿಲ್ಲಾ ಆಡಳಿತ ಕಚೇರಿಯು ಇನ್ನೂ ಪಾರ್ಕಿಂಗ್ ವ್ಯವಸ್ಯೆ ಇಲ್ಲದಿರುವುದು ನಾಚಿಕೆ ತರುವ ಕೆಲಸವಾಗಿದೆ.
ಜಿಲ್ಲಾಧಿಕಾರಿಯ ಕಚೇರಿಗೆ ದಿನಕ್ಕೆ ನಾಲ್ಕೈದು ಪ್ರತಿಭಟಣೆಗಳು ಬರುತ್ತವೆ. ಬರುವ ಪ್ರತಿಭಟನೆಕಾರರಿಗೆ ನಿಲ್ಲಿಲು ಜಾಗವಿಲ್ಲದೆ ಜಿಲ್ಲಾಧಿಕಾರಿಗೆ ಹಿಡಿಶಾಪ ಹಾಕುತ್ತಿದ್ದಾರೆÉ.

ಪಾಲಿಕೆಯಲ್ಲಿದೆ ಜಿಲ್ಲಾಧಿಕಾರಿ ಕಚೇರಿಗೆ ಇಲ್ಲ ಪಾರ್ಕಿಂಗ್ :
ಸ್ಮಾರ್ಟ ಸಿಟಿ ಅಡಿಯಲ್ಲಿ ಬೆಳಗಾವಿ ನಗರ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಅಂತೇಯೇ ಮಹಾನಗರ ಪಾಲಿಕೆಯಲ್ಲಿ ಸುಸ್ಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಆದರೆ ಜಿಲ್ಲಾಧಿಕಾರಿ ಕಚೇರಿಗೆ ಇಂತಹ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಬೇಕಾಗಿದೆ. ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸುವ ಜನರ ವಾಹನ ಪಾರ್ಕಿಂಗ್ ಹಾಗೂ ಜನರು ಕುಳಿತುಕೊಳ್ಳಲು ಸ್ಥಳ ಬೇಕಾಗಿರುವುದು ಎದ್ದುಕಾಣುತ್ತಿದೆ.
ಬಾಕ್ಸ್
ಖಾಸಗಿ ವಾಹನಗಳೇ ಹೆಚ್ಚು ಪಾರ್ಕಿಂಗ್:
ಹಳ್ಳಿಗಳಿಂದ ನಗರಕ್ಕೆ ಆಗಮಿಸುವರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಅಂತವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪಾರ್ಕಿಂಗ್ ಮಾಡಿ ಹೋದರೂ ಯಾರು ಕೇಳೋರು ಇಲ್ಲ. ಅಂತೇಯೆ ಇಲ್ಲಿ ಹೆಚ್ಚು ಖಾಸಗಿ ವಾಹನಗಳ ಪಾರ್ಕಿಂಗ್ ಕಂಡು ಬರುತ್ತದೆ. ನಗರಕ್ಕೆ ಕೆಲಸಕ್ಕೆ ಬರುವವರು ಇಲ್ಲಿ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ.
ಬಾಕ್ಸ್
ಜಿಲ್ಲಾಧಿಕಾರಿ ಕಚೇರಿಗೆ 25ಕ್ಕಿಂತ ಹೆಚ್ಚು ವಿವಿಧ ಇಲಾಖೆಗಳು ಕಚೇರಿಗಳು ಕೆಲಸ ನಿರ್ವಹಣೆ ಮಾಡುತ್ತವೆ. ಇಲ್ಲಿ ಜನಸ್ಪಂದ ಇಲಾಖೆಯು ಇಲ್ಲೆ ಇರುವುದರಿಂದ ದಿನಕ್ಕೆ ಸಾವಿರಾರೂ ಜನರು ತಮ್ಮ ಕೆಲಸಕ್ಕಾಗಿ ಇಲ್ಲಿಗೆ ಬರುವವರು ಅವರು ತಮ್ಮ ವಾಹನಗತಳನ್ನು ಎಲ್ಲಿ ನಿಲ್ಲಿಸಬೇಕು ಎಂಬುವುದು ತಿಳಿಯುತ್ತಿಲ್ಲ. ಯಾವುದಾದರು ಒಂದು ಸಭೆ ಇದ್ದರೆ. ತಾಲೂಕಿನ ಎಲ್ಲ ಅಧಿಕಾರಿಗಳು ಬಂದರೆ. ಅವರ ವಾಹನಗಳನ್ನು ಡಿಸಿ ಆವರಣದಲ್ಲೆ ನಿಲ್ಲಿಸಿ ಹೋಗುವುದರಿಂದ ಅದೇ ಸಮಯಕ್ಕೆ ಪ್ರತಿಭಟನೆಗಳು ಬಂದರೆ. ಅಲ್ಲಿ ಜನರು ನಿಲ್ಲಲು ಜಾಗವಿರುವುದಿಲ್ಲ. ಆರ್‍ಸಿ ಕಚೇರಿಯ ಎಡಗಡೆ ಖಾಲಿ ಇರುವ ಜಾಗದಲ್ಲಿ ಒಂದು ಸುಸಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಅಲ್ಲಿ ಒಂದು ಸರಕಾರಿ ಅಧಿಕಾರಿಗಳು ಇನ್ನೊಂದು ಕಡೆ ಸಾರ್ವಜನಿಕರು ವಾಹನಗಳು ನಿಲ್ಲುವ ವ್ಯವಸ್ಥೆಯಾಗಬೇಕು. ಬೇಕೆಂದರೆ ಅಲ್ಲಿ ಪಾರ್ಕಿಂಗ್ ಮಾಡುವವರಿಗೆ ಶೂಲ್ಕ್ ಪಡೆದು ಆ ಪಾರ್ಕಿಂಗ್ ಅಭಿವೃದ್ಧಿಗೆ ಹಾಕಲಿ.
ಸುಜೀತ್ ಮುಳಗುಂದ
ಸಾಮಾಜಿಕ ಕಾರ್ಯಕರ್ತ

loading...