loading...

ಧಾರವಾಡ : ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಲ್ಲ ಕಟ್ಟಡಗಳಿಗೆ ನೂತನವಾಗಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ಶ್ರೀಶಾನಂದ ಉದ್ಘಾಟಿಸಿದರು. ಉಚ್ಛ ನ್ಯಾಯಾಲಯದ ನಿರ್ದೇಶನದ ಪ್ರಕಾರ ಜಿಲ್ಲಾಡಳಿತ ಅತ್ಯಲ್ಪಾವಧಿಯಲ್ಲಿ ಮಂಜೂರು ಮಾಡಿದ ಕಾಮಗಾರಿ ಇದಾಗಿದೆ.ನ್ಯಾಯಾಧೀಶರು,ಆಡಳಿತ ವರ್ಗ, ಕಕ್ಷಿದಾರು ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದು ವಿ.ಶ್ರೀಶಾನಂದ ಹೇಳಿದರು.
ಜಿಲ್ಲಾ ನ್ಯಾಯಾಧೀಶರಾದ ಹೊಸಮನಿ ಸಿದ್ದಪ್ಪ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಎನ್.ಹೆಗಡೆ, ಪ್ರಾಧಿಕಾರದ ಸದಸ್ಯೆ ಪ್ರಫುಲ್ಲಾ ಎಸ್.ನಾಯ್ಕ,ಮುಖ್ಯ ಆಡಳಿತಾಧಿಕಾರಿ ಜಿ.ವಿ.ರಾಮನಗೌಡರ,ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜನಿಯರ್ ಎನ್.ಬಿ.ಅರಳಿಕಟ್ಟಿ,ಎಇಇ ವಿ.ಎನ್.ಪಾಟೀಲ, ಹಿರಿಯ ನ್ಯಾಯವಾದಿಗಳಾದ ವೆಂಕಟೇಶ ಕುಲಕರ್ಣಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...