ಡಿಸಿಪಿ ಜಿ. ರಾಧಿಕಾ ಬೀದರ ಎಸ್ಪಿಯಾಗಿ ವರ್ಗಾವಣೆ

0
138
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಜಂಟಿ ಪೊಲೀಸ್ ಆಯುಕ್ತರಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಸಿಪಿ ಜಿ. ರಾಧಿಕಾ ಅವರು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ನೇಮಕಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸುಮಾರು 7 ತಿಂಗಳ ಕಾಲ ರಾಧಿಕಾ ಅವರು ನಗರದಲ್ಲಿ ಸಂಭವಿಸುವ ಅಪರಾಧಗಳನ್ನು ತಡೆಯುವಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಹಾಗೇಯೆ 6 ಶಾರ್ಪ್ ಶೂಟರಗಳನ್ನು ಬಂಧಿಸಿ ಅವರ ಹಿಂದೆ ಯಾರ್ಯಾರು ಸೇರಿದ್ದಾರೆ ಅವರು ಎಲ್ಲೆಲ್ಲಿ ಇದ್ದಾರೆ ಎಂಬುವುದನ್ನು ವಿಚಾರಣೆ ವೇಳೆ ತಿಳಿದು ರಾಜ್ಯದ ವಿವಿಧೆಡೆಗೆ ಸಿಬ್ಬಂದಿಗಳನ್ನು ಕಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ರೋಹನ್ ರೇಡೆಕರ್, ಆಶೀಶ್ ರಂಜನ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಭೂಗತ ಪಾತಾಕಿ ರಶೀದ್ ಮಲಬಾರಿ ಗ್ಯಾಂಗ್‍ನ ಸಹಚರರನ್ನು ಬಂಧಿಸಿದ್ದಾರೆ. ನಗರದಲ್ಲಿ ಯಾವುದೇ ಕಾರ್ಯಕ್ರಮಗಳು ಜರುಗುವ ಮುನ್ನ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಂಡು ಶಾಂತಿಯುವತವಾಗಿ ಆಡಳಿತ ನಡೆಸಿದ್ದಾರೆ.
ಅಲ್ಲದೇ ನಗರದಲ್ಲಿ ನಡೆಯುವಂತ ಮೋಸ, ವಂಚನೆ ಪ್ರಕರಣ, ಲವ್ ಪ್ರಕರಣಕ್ಕೆ ಸಂಭಂಧಿಸಿದಂತೆ ಬಿಜಾಪೂರ ಮೂಲದ ಹುಡುಗಿ ತನ್ನ ಸ್ನೇಹಿತೆಯನ್ನು ಹಣಕ್ಕಾಗಿ ಕಿಡ್ನಾಪ್ ಆಗಿದ್ದ ಹುಡುಗಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿ ಪಾಲಕರಿಗೆ ನ್ಯಾಯ ಒದಗಿಸಿದ್ದಲ್ಲದೇ ಆರೋಪಿಗಳಿಗೆ ಬೇಡಿ ಹಾಕಿದ್ದಾರೆ. ಇನ್ನು ಅತ್ಯಾಚಾರ, ಬಾಂಗ್ಲಾದೇಶದ ನುಸುಳುಕೋರರ ಬಂಧನ ಸೇರಿದಂತೆ ಹಲವಾರು ಪ್ರಕರಣವನ್ನು ಬೇಧಿಸಿದ್ದಾರೆ. ವಾಮಾಚಾರ ಮಾಡುತ್ತಿದ್ದ ವ್ಯಕ್ತಿಗಳ ಬಂಧನ, ನಕಲಿ ಔಷಧಿಗಳನ್ನು ಮಾರುತ್ತಿದ್ದ ಅಂಗಡಿಗಳನ್ನು ಬಂದ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಹಾಗೇಯೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಚನ್ನಮ್ಮ ಪಡೆಯನ್ನು ನಿರ್ಮಿಸಿ ಮಹಿಳೆಯರು ನಗರದಲ್ಲಿ ನಿರ್ಭಯದಿಂದ ಓಡಾಡುವಂತೆ ಮಾಡಿದ ಕೀರ್ತೀ ಇವರಿಗೆ ಸಲ್ಲುತ್ತದೆ. ಯಾವುದಾದರು ಧಾರ್ಮಿಕ ಸಮಾರಭಂಗಳು ಸಂಭವಿಸುತ್ತಿದ್ದರೆ ಮುಂಚಿತವಾಗಿಯೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದರು.  ನಗರವನ್ನು ಸುವ್ಯವಸ್ಥೆಯಾಗಿ ಇಟ್ಟುಕೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

loading...