ಜುಮಕಿ ಕೊಡಿಸಲಿಲ್ಲ ಎಂದು ಬಾಲಕಿ ಆತ್ಮಹತ್ಯೆ

0
245
loading...

 
ಕನ್ನಡಮ್ಮ ಸುದ್ದಿ
ಬೆಳಗಾವಿ:5 ಖಾನಾಪೂರ ತಾಲೂಕಿನ ಮಾಡಿಗುಂಜಿ ಗ್ರಾಮದ ವಿದ್ಯಾರ್ಥಿನಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂಜನಾ ಸುರೇಶ ಗುರವ(15) ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 8ನೇ ತರಗತಿ ಮುಗಿಸಿರುವ ಈಕೆ ಇನ್ನು9 ತರಗತಿಯ ವಿದ್ಯಾರ್ಥಿನಿ. ಕಿವಿಯಲ್ಲಿ ಹಾಕಿಕೊಳ್ಳಲು ಜುಮಕಿ ಕೊಡಿಸುವಂತೆ ಒತ್ತಾಯಿಸಿದ್ದಳು. ತಾಯಿ ಎರಡು ದಿನ ಕಳೆಯಲಿ, ಕೊಡಿಸುವುದಾಗಿ ಹೇಳಿದ್ದರು. ತಾಯಿ ಕಾಜು ಮಾರಿ ಬಂದ ಹಣದಿಂದ ದೊಡ್ಡ ಮಗಳಿಗೆ ರಿಂಗ್ ಮಾಡಿಸಿ ಕೊಟ್ಟಿದ್ದರು.. ತನಗೆ ಏನನ್ನು ಕೊಡಿಸಲಿಲ್ಲ ಎಂದು ನೊಂದು ಸಂಜನಾ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...