ಕನ್ನಡಮ್ಮ ಸುದ್ದಿ-ಚಿಕ್ಕೋಡಿ : ತಾಲೂಕಿನ ಇಂಗಳಿ ಗ್ರಾಮದ ಮಸೋಬಾ ದೇವರ ಜಾತ್ರೆಯ ಅಂಗವಾಗಿ ಆಯೋಜೀಸಲಾದ ಎತ್ತಿನಗಾಡಿ ಶರ್ಯತ್ತಿನಲ್ಲಿ ಶಿರೋಳ ತಾಲೂಕಿನ ಜಾಂಬಳಿ ಗ್ರಾಮದ ಬಾಳಾಸಾಹೇಬ ಯಾದವ ಇವರ ಎತ್ತಿನ ಗಾಡಿ ಪ್ರಥಮ ಸ್ಥಾನ ಪಡೆದು  15001 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಈ ಶರ್ಯತ್ತಿನಲ್ಲಿ ಎರಡನೇ ಸ್ಥಾನ ಮಿರಜ ತಾಲೂಕಿನ ಬೆಡಗ ಗ್ರಾಮದ ರಮೇಶ ಪಾಟೀಲ ಮೂರನೇ ಸ್ಥಾನ ಕುಪವಾಡ ಸಾಂಗಲಿಯ ಬಾಳಾಸಾಹೇಬ ಪಾಟೀಲ ಹಾಗೂ ನಾಲ್ಕನೇಯ ಸ್ಥಾನವನ್ನು ಮಾಂಜರಿ ಗ್ರಾಮದ ಅಥರ್ವ ಶಿರಡೋಣೆ ಇವರ ಎತ್ತಿನ ಗಾಡಿ ಪಡೆದು ಇವರಿಗೆ ಅನುಕ್ರಮವಾಗಿ 8001, 5001, 2001 ರೂ. ನದಗು ಬಹುಮಾನ ನೀಡಲಾಯಿತು
ಕುದರೆಗಾಡಿ ಶರ್ಯತ್ತಿನಲ್ಲಿ ಶಿರೋಳ ಗ್ರಾಮದ ವಿನಾಯಕ ಸೌಂದಲಗೆ ಇವರು ಪ್ರಥಮ ಸ್ಥಾನ, ಸಂತೋಷವಾಡಿಯ ಅಮೋಲ ಶೀಂಧೆ ಇವರು ದ್ವಿತಿಯ ಸ್ಥಾನ, ತೆರವಾಡ ಗ್ರಾಮದ ಅಮೋಲ ಮಗದುಮ್ಮ ಇವರು ಮೂರನೆ ಸ್ಥಾನ ಪಡೆದು ಇವರಿಗೆ ಅನುಕ್ರಮವಾಗಿ 5001, 3001, 2001 ರೂ. ನಗದು ಬಹುಮಾನ ನೀಡಲಾಯಿತು
ಕುದರೆ ಶರ್ಯತ್ತಿನಲ್ಲಿ ಚಿಂಚಲಿ ಗ್ರಾಮದ ಸಿದ್ದಾರ್ಥ ಮಗಲಟ್ಟಿ, ಇವರು ಪ್ರಥಮ ಸ್ಥಾನ ಶೆಡಶಾಳ ಗ್ರಾಮದ ಸುರೇಶ ನಾಯಿಕ ಇವರು ದ್ವೀತೀಯ ಸ್ಥಾನ ಅಲಖನುರ ಗ್ರಾಮದ ರಾಜು ಅಲಖನೂರ ಇವರು ತೃತೀಯ ಸ್ಥಾನ ಪಡೆದು ಇವರಿಗೆ ಅನುಕ್ರಮವಾಗಿ 1501, 1001, 701 ರೂ. ನಗದು ಬಹುಮಾನ ನೀಡಲಾಯಿತು ಈ ಎಲ್ಲ ಶರ್ಯತ್ತಿನಲ್ಲಿ ಬಹುಮಾನ ಪಡೆದ ಎಲ್ಲರಿಗೆ ಸಂಜಯ ಕುಡಚೆ, ಗಣಪತಿ ಧನವಾಡೆ, ಸುನೀಲ ಕುಡಚೆ, ವಿಜಯ ಕುಡಚೆ, ಪೋಪಟ ಚೌಗಲೆ, ಪರಶುರಾಮ ಕೋಳಿ, ಮಾರುತಿ ಜತ್ರಾಟೆ, ವಿಜಯ ಚಿಂಚಲೆ, ಸಂಜಯ ಮಗದುಮ್ಮ, ದಾದಾಸಾಹೇಬ ಚೌಗಲೆ, ಹಾಗೂ ಮಸೋಬಾ ಯುವಕ ಮಂಡಳದ ಪದಾಧಿಕಾರಿಗಳ ಹಸ್ತದಿಂದ ಬಹುಮಾನ ವಿತರಿಸಲಾಯಿತು.
loading...