ಝುಂಜರವಾಡ ಗ್ರಾಮದ ದುರಂತದಿಂದ ಎಚ್ಚೆತ್ತುಕೊಂಡ ತಾಲೂಕಾಡಳಿತ

0
310
loading...

 

ಮುತ್ತು.ಆರ್.ಕಮ್ಮಾರ
ರಾಮದುರ್ಗಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜುಂಜರವಾಡÀ ಗ್ರಾಮದಲ್ಲಿ ತೆರದ ಕೊಳವೆ ಬಾವಿಗೆ ಬಿದ್ದು ಮರಣ ಹೊಂದಿದ ಕಾವೇರಿ ಮಾದರ ಘಟನೆಯಿಂದ ಎಚ್ಚತ್ತುಕೊಂಡ ತಾಲೂಕಾ ಆಡಳಿತ ತೆರದ ಕೊಳವೆ ಭಾವಿಗಳನ್ನು ಮುಚ್ಚವ ಕಾರ್ಯದಲ್ಲಿ ತೊಡಗಿದೆ,
ಸತತ ನಾಲ್ಕೆದು ವರ್ಷಗಳಿಂದ ಬರಗಾಲ ಅವರಿಸಿದ್ದರಿಂದ ಕೊಳವೆ ಬಾವಿಗಳು ತಂರ್ತಜಲ ಕುಸಿದ ಕಾರಣ ಕೊಳವೆ ಭಾವಿಗಳು ಬತ್ತಿಹೊಗಿವೆ. ರಾಮದುರ್ಗ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ತಿಂಗಳ ಹಿಂದೆ ಕೊರೆಯಿಸಿದ ತರೆದ ಕೊಳವೆ ಭಾವಿಗಳು ಕಂಡು ಬರುತ್ತಿವೆ. ರೈತರು ತಮ್ಮ ಹೊಲಗಳಲ್ಲಿ ಕೊರೆಯಿಸಿದ ಕೊಳವೆ ಭಾವಿಗಳು ಹಾಗೆ ಬಿಟ್ಟಿರುವದರಿಂದ ಇಂತಹ ಅವಾಂತರಕ್ಕೆ ಕಾರಣವಾಗಿರುವ ಕೊಳವೆ ಭಾವಿಗಳು ಮುಚ್ಚಲು ಅಧಿಕಾರಿಗಳಿಂದ ಮಾತ್ರ ಆಗದು ಇದಕ್ಕೆ ರೈತರು, ಸಾರ್ವಜನಿಕರು ಕೈಜೋಡಿಸಬೇಕಾಗಿದೆ.
ತಂಡಗಳ ರಚನೆ.
ಇಗಾಗಲೆ ಏಳು ಜನ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು. ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ 37 ತಂಡವನ್ನು ರಚಿಸಲಾಗಿದ್ದು ಅದರಲ್ಲಿ ಅಧ್ಯಕ್ಷರು, ಪಿಡಿಯೊ. ಬೀಟ ಪೋಲಿಸ ಅಧಿಕಾರಿಗಳು ಪ್ರತಿ ಗ್ರಾಮಗಳನ್ನು ಸುತ್ತಿ ಕೆಳವೆ ಭಾವಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನ ಕೊಳವೆ ಭಾವಿಗಳ ಸಂಖ್ಯೆ.
ರಾಮದುರ್ಗ ತಾಲೂಕಿನಲ್ಲಿ ಒಟ್ಟ ಕೊಳವೆ ಭಾವಿಗಳ ಸರ್ಕಾರಿ ಗ್ರಾಮ ಪಂಚಾಯತ 1399, ಅಂಗನವಾಡಿಯಲ್ಲಿ 03, ಸಾರ್ವಜನಿಕರು ವಯಕ್ತಿಕವಾಗಿ ಕೊಳವೆ ಭಾವಿಗಳು 562, ಕೃಷಿ ಕ್ಷೇತ್ರದಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ 4348. ಒಟ್ಟು 6340 ಕೊಳವೆ ಭಾವಿಗಳು ಉಪಯುಕ್ತವಾಗಿವೆ.ಘಟನೆ ನಡೆದ ಏ 24 ರಿಂದ ಇಲ್ಲಯವರೆಗೆ ಒಟ್ಟು 707 ನಿರುಪಯುಕ್ತ ಕೊಳವೆ ಭಾಗಿಳನ್ನು ಮುಚ್ಚಲಾಗಿದೆ. ಮೇ 20 ಕೊನೆಯ ದಿನವಾಗಿದ್ದರಿಂದ ಇನ್ನು ಉಳಿದ ತೆರೆದ ಕೊಳವೆ ಭಾವಿಗಳನ್ನು ಮುಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಅಧಿಕಾರಿಗಳ ಗೋಳು ಕೇಳುವರಾರಿಲ್ಲ.
ರೈತರು ಹಾಗೂ ಬೋರವೆಲ್ಲ ಮಾಲಿಕರು ಮಾಡುವ ತಪ್ಪಿನಿಂದಾಗಿ ಅಧಿಕಾರಿಗಳಿಗೆ ಶಿಕ್ಷೆಯನ್ನು ಅನುಭವಿಸುವಂತ್ತಾಗಿದೆ, ಕಚೇರಿಯಲ್ಲಿ ಪ್ರತಿನಿತ್ಯ ಸಾಕಷ್ಟು ಕೆಲಸಗಳಿದ್ದರೂ,ರೈತರ ಜಮೀನುಗಳಿಗೆ ಬೇಸಿಗೆ ಸುಡು ಬಿಸಿಲಿನಲ್ಲಿ ಸುತ್ತಿ ಕೊಳವೆ ಭಾವಿಗಳನ್ನು ಮುಚ್ಚುವ ಕಾರ್ಯ ಮಾಡುವುದರಿಂದ ಇಲಾಖೆಯಲ್ಲಿ ಕೆಲಸಗಳು ಹೆಚ್ಚಾತ್ತಿದೆ. ಕೇಲಸಕ್ಕಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಾರೆ.
ಬಾಕ್ಸ್:
ಸರಕಾರದಿಂದ ಕೊರೆಸಿದ ಕುಡಿಯುವ ನೀರಿಗಾಗಿ ಕೊಳವೆಭಾವಿ ನೀರು ಬರದಿದರೆ ತಕ್ಷಣದಲ್ಲಿ ಅವುಗಳನ್ನು ಮುಚ್ಚುತ್ತಾ ಬರಲಾಗಿದೆ. ಆದರೆ ರೈತರು ತಮ್ಮ ಜಮೀನಿನಲ್ಲಿ ಕೊರೆಸಿದ ಕೊಳವೆಭಾವಿ ವಿಫಲವಾದರೆ ಅದನ್ನು ಮುಚ್ಚದೆ ಹಾಗೇ ಬಿಟ್ಟಿರುವುದು ಕಂಡು ಬಂದಿದೆ. ಒಂದು ವೇಳೆ ಹಾಗೇ ಬಿಟ್ಟರೆ ಏನಾದರೂ ತೊಂದರೆ ಸಂಭವಿಸಿದರೆ ರೈತರನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ತಹಸೀಲ್ದಾರ ಪ್ರವೀಣ ಹುಚ್ಚನ್ನವರ ಎಚ್ಚರಿಕೆ ನೀಡಿದ್ದಾರೆ.
ಬಾಕ್ಸ್:
ಕೊಳವೆ ಭಾವಿಗಳನ್ನು ಕೊರೆಯಿಸಿದವರು ರೈತರಾಗಿಗಲಿ ಸಾರ್ವಜನಿಕರಾಗಲಿ ಏನಾದರೂ ಆದರೂ ನಮಗೆ ತೊಂದರೆ ಯಾಗುತ್ತದೆ. ಕಾರಣ ರೈತರು ತಮ್ಮ ಹೊಲಗಳಲ್ಲಿ ಕೊರೆÀಯಿಸದ ಹಾಗೂ ರಸ್ತೆಯ ಅಕ್ಕ ಪಕ್ಕ ಕಂಡು ಬರುವ ತೆರೆದ ಕೊಳವೆ ಭಾವಿಗಳನ್ನು ಮುಚ್ಚಲು ನಾವು ಅಧಿಕಾರಿಗಳೊಂದಿಗೆ ಕೈಜೋಡಿಸಿದಾಗ ಮಾತ್ರ ಮುಂದಾಗುವ ಅನಾವುತವನ್ನು ತಪ್ಪಿಸಿದಂತಾಗುತ್ತದೆ ಎಂದು
ರೈತ ಮುಖಂಡ

loading...