ಟೆಂಪು ಪಲ್ಟಿ 12 ಜನ ಗಂಭೀರ ಗಾಯ

0
91
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಹಣದ ಆಶೆಗೆ ಅತೀಯಾಗಿ ತುಂಬಿಕೊಂಡು ಮೊರೆ ಗ್ರಾಮದ ಪ್ಯಾಸೆಂಜರ್ ಟೆಂಪು ಹನುಮನಟ್ಟಿ ಗ್ರಾಮದ ಹತ್ತಿರ ಚಾಲಕನ ನಿಷ್ಕಾಳಜಿಯಿಂದ ಪಲ್ಟಿಯಾಗಿ ಬಿದ್ದ ಪರಿಣಾಮ 12 ಜನ ಗಂಭೀರ ಗಾಯವಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ ದೇಸೂರು ಗ್ರಾಮದ ಸಂತೆಯ ನಿಮಿತ್ಯವಾಗಿ ಮಾವಿನ ಹಣ್ಣಿನ ವ್ಯಾಪಾರಿಗಳು ಮಾರಿಹಾಳದಿಂದ ಸುಮಾರು 10 ಕ್ವೀಂಟಾಲ್ ಕ್ಕೂ ಹೆಚ್ಚು ಹಣ್ಣುಗಳು, 40 ಕ್ಕೂ ಹೆಚ್ಚು ಪ್ಯಾಸೆಂಜರ್‍ನನ್ನು ಹತ್ತಿಸಿಕೊಂಡು ಬೆಳಗಾಯಿಂದ ನೇಸರಗಿ ಕಡೆಗೆ ಹೋಗುವ ಸಂದರ್ಭದಲ್ಲಿ ಬೆಳಿಗ್ಗೆ 8.30 ಕ್ಕೆ ಹನುಮನಟ್ಟಿ ಹತ್ತಿರ ಇಳಿಜಾರು ಇರುವ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ತಕ್ಷಣ ಅಂಬ್ಯುಲೆನ್ಸ್‍ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ವಾಹನ ಚಾಲಕ, ಕಿನ್ನರ ಪರಾರಿಯಾಗಿದ್ದಾರೆ. ಈ ಕುರಿತು ನೇಸರಗಿ ಪಿಎಸ್‍ಐ ಶರಣೇಶ ಜಾಲಿಹಳಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

loading...