ಕನ್ನಡಮ್ಮ ಸುದ್ದಿ-ನಿಪ್ಪಾಣಿ : ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಳೀಯ ಶಾಖೆಯ 5ನೇ ವಾರ್ಷಿಕೋತ್ಸವ ಬುಧವಾರದಂದು ಆಚರಿಸಲಾಯಿತು.
ಅದ್ಯಕ್ಷತೆವಹಿಸಿದ್ದ ಶಾಖೆ ಚೇರಮನ್ ಅಮರ ಬಾಗೇವಾಡಿ ಮಾತನಾಡಿ, 2012 ರಲ್ಲಿ ಪ್ರಾರಂಭವಾದ ಶಾಖೆ 5 ವರ್ಷದಲ್ಲಿ 54 ಕೋಟಿ ರೂ ಠೇವು ಸಂಗ್ರಹಿಸಿದ್ದು 1.06 ಕೋಟಿ ರೂ ಸಾಲ ವಿತರಿಸಿದೆ.ಕಳೆದ ಸಾಲಿನಲ್ಲಿ 30 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಶಾಖೆಯಲ್ಲಿ ಇ-ಸ್ಟಾಂಪ ಬಾಂಡ ಪೇಪರ್,ಆರಟಿಜಿಎಸ್,ಮೊಬೈಲ ಟಿವಿ ರಿಚಾರ್ಜ,ಬಸ್, ರೇಲ್ವೆ, ವಿಮಾನ ಟಿಕೆಟ್ ಬುಕ್ಕಿಂಗ ಸೇವೆ ನೀಡಲಾಗುತ್ತಿದ್ದು ಗ್ರಾಹಕರು ಇದರ ಲಾಭ ಪಡೆದುಕೊಳ್ಳುವಂತೆ ಹೇಳಿದರು.
ಪ್ರಧಾನ ವ್ಯವಸ್ಥಾಪಕ ಡಿ.ಎಸ್.ಕರೋಶಿ, ಶಾಖೆ ಸಂಚಾಲಕರಾದ ರವೀಂದ್ರ ಶೆಟ್ಟಿ,ರಾಜು ಗುಂದೇಶಾ,ಮಿಲಿಂದ ಚೌಗಲಾ,ಅಶೋಕ ರಾವುತ,ವಿ.ಎಸ್.ಡೊಲೆ,ಅಶೋಕ ಬನ್ನೆ,ಹಾಗೂ ಗ್ರಾಹಕರು ಸಿಬ್ಬಂದಿ ಉಪಸ್ಥಿತರಿದ್ದರು.ಶಾಖಾ ವ್ಯವಸ್ಥಾಪಕ ಪ್ರದೀಪ ಬಿಳ್ಳೂರೆ ಸ್ವಾಗತಿಸಿ ವಂದಿಸಿದರು.
loading...