ಡಿಸಿಸಿ ಬ್ಯಾಂಕಿನಲ್ಲಿ ಐದುವರೆ ಕೆಜಿ ಬಂಗಾರ, 30 ಲಕ್ಷ ಹಣ ದರೋಡೆ

0
44
loading...

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ ಶಾಖೆಯಲ್ಲಿ 5 ಕೆಜಿ 500 ಗ್ರಾಮ್ ಬಂಗಾರ, 30 ಲಕ್ಷ ರೂ ನಗದು ಹಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಸೋಮವಾರ ಬೆಳ್ಳಿಗ್ಗೆ ನಡೆದಿದೆ.
ಬ್ಯಾಂಕಿನ ಬಾಗಿಲನ್ನು ಕಟ್ಟರಿನಿಂದ ಮುರಿದು ಕಳ್ಳರು ಓಳಗೆ ನುಗ್ಗಿ ಲಾಕರಿನಲ್ಲಿದ್ದ ಹಣ, ಬಂಗಾರವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಸ್ಥಳದಲ್ಲಿ ಪರೀಶಿಲನೆ ನಡೆಸುತ್ತಿದ್ದ ಸಂಕೇಶ್ವರ ಸಿಪಿಐ ಮಾಹಿತಿ ನೀಡಿದ್ದಾರೆ. ಇನ್ನು ಕಳ್ಳರನ್ನು ಪತ್ಯೆಹಚ್ಚಲು ಶ್ವಾನಧಳವನ್ನು ಕರೆತಂದು ತಪಾಸನೆ ಮಾಡುತ್ತಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

loading...