loading...

ನವದೆಹಲಿ: ಭಾರತ ಕಿಕ್ರೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್ 10ನೇ ಆವೃತ್ತಿಯಲ್ಲಿ ಧೋನಿ ಕೇವಲ ಆಟಗಾರನಾಗಿ ಪುಣೆ ಪರ ಆಡುತ್ತಿದ್ದಾರೆ. ಇದೇ ಪುಣೆ ತಂಡದಲ್ಲಿ ಸೌತ್ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಸಹ ಒಬ್ಬರು. ಆದ್ರೆ ಏರ್‍ಪೋರ್ಟ್‍ವೊಂದರಲ್ಲಿ ಇಮ್ರಾನ್ ಮಗನ ಜೊತೆ ಧೋನಿ ಕೆಲ ಸಮಯ ಕಳೆದಿದ್ದಾರೆ. ಈ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಧೋನಿ ಫ್ಯಾನ್ಸ್ ತಮ್ಮ ಟ್ವಿಟ್ಟರ್‍ನಲ್ಲಿ ಹಾಕಿಕೊಂಡಿದ್ದಾರೆ. ಧೋನಿ ಏರ್‍ಪೋರ್ಟ್ ನೆಲದ ಮೇಲೆ ಕುಳಿತುಕೊಂಡು ಇಮ್ರಾನ್ ಮಗ ಗಿಬ್ರಾನ್ ಜೊತೆ ಆಟವಾಡಿದ್ದಾರೆ. ಇದರಿಂದಾಗಿ ಅವರ ಸರಳತೆಯನ್ನು ತೋರುತ್ತದೆ. ಇಮ್ರಾನ್ ಮಗ ಗಿಬ್ರಾನ್ ಜೊತೆಗೆ ಕಳೆದಿರುವ ಅದ್ಭುತ ಕ್ಷಣಗಳನ್ನು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫ್ಯಾನ್ಸ್ ಹಂಚಿಕೊಂಡಿದ್ದಾರೆ. ಗಿಬ್ರಾನ್ ಜತೆಗೆ ತೆಗೆಸಿಕೊಂಡಿರುವ ಸುಂದರ ಫೋಟೊ ಮತ್ತು ವಿಡಿಯೋ ವೈರಲ್ ಆಗಿದೆ.

loading...