ಧಾರವಾಡ ಡಿಸಿ ಕಾರು ಕಿತ್ತೂರಿನಲ್ಲಿ ಅಪಘಾತ

0
322
loading...

ಕನ್ನಡಮ್ಮ ಸುದ್ದಿ

ಚನ್ನಮ್ಮ ಕಿತ್ತೂರು :18 ಧಾರವಾಡ ಜಿಲ್ಲಾಧಿಕಾರಿ ಚಲಿಸುತ್ತಿದ್ದ ಇನ್ನೋವಾ ಕಾರು ತಾಲೂಕಿನ ದಾಸ್ತಿಕೊಪ್ಪ ಹತ್ತಿರ ಗುರುವಾರ ಅಪಘಾತಕ್ಕಿಡಾಗಿದೆ.

ಬೆಳಗಾವಿ ಇಂದ ಧಾರವಾಡಕ್ಕೆ ಜಿಲ್ಲಾಧಿಕಾರಿ ಎಸ್.ವಿ.ಬೋಮ್ಮನಹಳ್ಳಿ ಇನ್ನೊವಾ ಕಾರಿನಲ್ಲಿ ಚಲಿಸುತ್ತಿದ್ದರೆನ್ನಲಾಗಿದ್ದು ತಾಲೂಕಿನ ದಾಸ್ತಿಕೊಪ್ಪ ಬಳಿ ಹೆದ್ದಾರಿಗೆ ಅಡ್ಡಲಾಗಿ ಹಾಕಿರುವ ವೇಗತಡೆಗೆ ತಮ್ಮ ವಾಹನವನ್ನು ನಿಧಾನಗೊಳಿಸಿದ್ದಕ್ಕೆ ಹಿಂದಿನಿಂದ ಬಂದ ಐಶರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಕಿತ್ತೂರ ಪಿ.ಎಸ್.ಐ ಮಲ್ಲಿಕಾರ್ಜುನ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣವನ್ನು ದಾಖಲಿಸಿದ್ದಾರೆ.

loading...