ನಾಪತ್ಯೆಯಾಗಿದ್ದ ಉದ್ಯಮಿ ರೋಹನ್ ಶವ ಪತ್ಯೆ

0
52
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಳೇದ ಎರಡು ವರ್ಷದಿಂದ ಹಿಂದೆ ಅಪಹರಣವಾಗಿದ್ದ ಉದ್ಯಮಿಯೊಬ್ಬರ ಮಗ ರೋಹನ್ ರೇಡೆಕರ ಭಾನುವಾರ ಚೋರ್ಲಾ ಘಾಟನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ. ಈ ಕುರಿತು ಭೂಗತ ಪಾತಕಿ ರಶೀದ ಮಲಬಾರಿಯ ಏಳೆಂಟು ಜನ ಸಹಚರರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದು, ಅಪಹರಣ ಹಾಗೂ ಕೊಲೆ ಪ್ರಕರಣದ ತೀವ್ರ ವಿಚಾರಣೆ ಮುಂದಾಗಿದ್ದಾರೆ ಎಂಬ ಮಾಹಿತಿ ಪೆÇಲೀಸ ಮೂಲಗಳಿಂದ ತಿಳಿದುಬಂದಿದೆ.
2014 ರಲ್ಲಿ ಪಾತಕಿ ರಶೀದ ಮಲಬಾರಿ ಜಾಮೀನಿನ ಮೇಲೆ ಮಂಗಳೂರು ಜೈಲಿನಿಂದ ಬಿಡುಗಡೆಯಾಗಿದ್ದ. ನಂತರ ಕಣ್ಮರೆಯಾಗಿದ್ದ. ಈ ಕುರಿತು. ದುಬೈನಲ್ಲಿ ವಾಸವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಈತನ ಬಂಧನಕ್ಕೆ ಮಂಗಳೂರು ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಆದರೇ, ಈ ಪಾತಕಿ ಕಳೇದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಬಿಡಿಬಿಟ್ಟು ಬೆಳಗಾವಿ- ಮುಂಬೈ ಹೆದ್ದಾರಿಯಲ್ಲಿ ಸಂಚರಿಸುತ್ತಾ ತನ್ನ ಪಾತಕ ಕೃತ್ಯಗಳನ್ನು ಮುಂದುವರೆಸಿದ್ದನು. ರಶೀದ ಮಲಬಾರಿ ಸಹಚರರು ಬೆಳಗಾವಿ ಪೆÇಲೀಸರ ಅನ್ಯ ಕಾರ್ಯಾಚರಣೆ ಸಂದರ್ಭದಲ್ಲಿ ಬಲೆಗೆ ಬಿದ್ದಿದ್ದಾರೆ.

ಮಂಗಳೂರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೂ ಹೋಗದೇ ಬೆಳಗಾವಿಯಲ್ಲಿ ಉಳಿದಿದ್ದ ಯಾರಿಗೂ ಗೊತ್ತಾಗದಂತೆ ನೆರೆಯ ಮುಂಬೈ ಬೆಳಗಾವಿ ನಡುವೆ ಓಡಾಡಿಕೊಂಡಿದ್ದ ಬೆಳಗಾವಿಯಲ್ಲಿ ಮಾಮು ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಭೂಗತ ಪಾತಕಿಗೆ ಇಲ್ಲಿನ ಮಾಜಿ ಜಿಪಂ ಅಧ್ಯಕ್ಷರ, ಮಹಾನಗರ ಪಾಲಿಕೆ ಸದಸ್ಯರಿಂದ ಪಾತಕಿಗೆ ಸಹಾಯ ತಮ್ಮ ಫಾರ್ಮ ಹೌಸ್, ಮನೆಗಳಲ್ಲಿ ಆಶ್ರಯ ನೀಡಿದ್ದರು, ಬೆಳಗಾವಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳ ಪಟ್ಟಿ ಮಾಡಿದ್ದರು. ಬೆದರಿಕೆ ಹಾಕಿ ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಪಾತಕಿಗಳು 100ಕ್ಕೂ ಹೆಚ್ಚು ಯುವಕರ ಪಡೆಯನ್ನೇ ಕಟ್ಟಿಕೊಂಡಿದ್ದ ಮಲಬಾರಿಗೆ ಮೂವರು ಸೀಮಿ ಕಾರ್ಯಕರ್ತರು ಸಾಥ್ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪೊಲೀಸರು ನಡೆಸಿದ ತನಿಖೆ ವೇಳೆ ಹಣಕ್ಕಾಗಿ ಹಲವು ಹತ್ಯೆ ಮಾಡಿರುವುದು ತಪೆÇಪ್ಪಿಕೊಂಡಿದ್ದು, ಅಲ್ಲದೇ ಬೆಳಗಾವಿ ಉದ್ಯಮಿ ಮಗನ ಅಪಹರಿಸಿ ಹತ್ಯೆ ಮಾಡಿದ ಪಾತಕಿಗಳಿಗೆ ಹಣ ನೀಡುವುದಾಗಿ ಹೇಳಲಾಗಿದ್ದರೂ ಬಿಡದೇ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಈ ಪಾತಕಿಗಳಿಂದ ಇತ್ತಿಚೆಗೆ ಡಿಫ್‍ಒ ಅಧಿಕಾರಿ ಪತ್ನಿಯನ್ನು ಇವರೆ ಕೊಲೆ ಮಾಡಿರಬಹುದು ಎಂದು ಪೊಲೀಸ್‍ರಿಗೆ ಅನುಮಾನ ಬಂದಿದೆ. ಹಾಗೇಯೆ ಎಷ್ಟು ಇಂತಹ ಪ್ರಕರಣಗಳು ನಡೆದಿವೆ ಮತ್ತು ಇವರಿಗೆ ಯಾರ್ಯಾರು ನೆಲೆ ಹಾಗೂ ಸಹಕಾರ ನೀಡಿದ್ದಾರೆ ಎಂಬುವುದು ಪೆÇಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

loading...