ನಿಡಶೇಸಿ ಗ್ರಾಮದಲ್ಲಿ ಮನಸೂರೆಗೊಂಡ ‘ರತಿ ಕಲ್ಯಾಣ’ ನಾಟಕ ಪ್ರದರ್ಶನ

0
55
loading...

ಕನ್ನಡಮ್ಮಸುದ್ದಿ-ಕುಷ್ಟಗಿ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ಚನ್ನಬಸವೇಶ್ವರ ಬಯಲಾಟ ಸಂಘ ನಿಡಶೇಸಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕಿನ ನಿಡಶೇಸಿ ಗ್ರಾಮದ ರಂಗ ಮಂದಿರಲ್ಲಿ ರತಿ ಕಲ್ಯಾಣ ಅರ್ಥಾತ್ ಕೌಂಡ್ಲಿಕನ ವಧೆ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ನೆರವೇರಿಸಿ ಮಾತನಾಡಿ ಪ್ರಾಚೀನ ಕಲೆಗಳಾದ ಬಯಲಾಟ, ದೊಡ್ಡಾಟ, ಜಾನಪದದಂತಹ ಅನೇಕ ಕಲೆಗಳು ನಶಿಸುವ ಹಂತದಲ್ಲಿದ್ದು ಇಂದಿನ ಟಿವಿ ಮಾಧ್ಯಮದ ಕಾಲದಲ್ಲಿ ಇಂತಹ ಕಲೆಗಳು ಉಳಿದಿರುವುದಕ್ಕೆ ನಮ್ಮ ತಾಲೂಕು ಸಾಕ್ಷಿಯಾಗಿದೆ. ಯುವ ಪೀಳಿಗೆಯವರು ಇಂತಹ ನಮ್ಮ ನಾಡಿನ ಕಲೆಗಳನ್ನು ಮೈಗೂಡಿಸಿಕೊಂಡು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಬ್ರ ಚನ್ನಬಸವೇಶ್ವರ ಮಹಾಸ್ವಾಮಿಗಳು ನಿಡಶೇಸಿ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಯಂಕಮ್ಮ ತಳವಾರ ವಹಿಸಿದ್ದರು. ಮುಖ್ಯತಿಥಿಗಳಾಗಿ ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಶರಣಪ್ಪ ಚೂರಿ, ಫಕೀರಪ್ಪ ಚಳಗೇರಿ, ಕಲ್ಲೇಶ ತಾಳದ, ಹುಲ್ಲಪ್ಪ ಚೂರಿ, ಶರಣಪ್ಪ ಹಾದಿಮನಿ, ಫಕೀರಪ್ಪ ಚಳಗೇರಿ, ಚನ್ನಪ್ಪ ಚಳಗೇರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿದ್ದರು. ವಾಧ್ಯ ಹಾಗೂ ಸಂಗೀತ ಸೇವೆಯನ್ನು ಶರಣಪ್ಪ ಬನ್ನಿಗೋಳ, ಗುಂಡಪ್ಪ ಚಳಗೇರಿ, ಬಾಳಪ್ಪ ಹಾವರಗಿ, ಸಂಗಪ್ಪ ಹುಣಚಿಹಾಳ ಕಲಾ ಬಳಗದವರು ನೀಡಿದರು.

loading...