loading...

ಕನ್ನಡಮ್ಮ ಸುದ್ದಿ-ಧಾರವಾಡ : ಹನ್ನೇರಡನೇ ಶತಮಾನದ ಪೂರ್ವದ ಅಸ್ಥಿತ್ವದಲ್ಲಿದ್ದ ಬಸ್ತಿ ಓಣಿಯ ಶ್ರೀ ಆದಿನಾಥ ಜಿನÀÀ ಮಂದಿರ ಜೀರ್ಣೋದ್ದಾರಗೊಂಡಿದ್ದು ಶಾಸ್ತ್ರೋಕ್ತವಾಗಿ ಆದಿನಾಥನ ಮೂಲ ವಿಗ್ರಹ ಹಾಗೂ ನವನಿರ್ಮಿತ ಮಾನಸ್ಥಂಭದಲ್ಲಿ ಚರ್ತುಮುಖ ಜಿನಬಿಂಬ ಪ್ರತಿಷ್ಟಾಪನೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವು ಪರಮಪೂಜ್ಯ ಶ್ರೀ ಬಾಲಾಚಾರ್ಯ ಶ್ರೀ ಸಿದ್ಧಸೇನ ಮುನಿಮಹಾರಾಜರ ಸಾನಿಧ್ಯದಲ್ಲಿ ಮೇ 26 ರಿಂದ 30 ರವರೆಗೆ ನಡೆಯಲಿದೆ ಎಂದು ದತ್ತಾ ಡೋರ್ಲೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹನ್ನೇರಡನೇ ಶತಮಾನದ ಪೂರ್ವದಲ್ಲಿ ಅನೇಕ ಜಿನ ಮಂದಿರಗಳು ಕಾಲನ ಹೊಡೆತಕ್ಕೆ ಸಿಲುಕಿ ನಾಶವಾಗಿವೆ. ಹೊಸಯಲ್ಲಾಪುರ ಬಸ್ತಿ ಓಣಿಯ ಶ್ರೀ ಆದಿನಾಥ ಜಿನ ಮಂದಿರವು ಹನ್ನೇರಡನೇ ಶತಮಾನಕ್ಕೆ ಸೇರಿದ ಎರಡು ಶಿಲಾಶಾಸನಗಳು ದೊರೆತಿದ್ದು ಇದನ್ನು ಜೀರ್ಣೋದ್ಧಾರಗೊಳಿಸಿ ಮತ್ತೆ ಮುಂದಿನ ಪೀಳಿಗೇಗಾಗಿ ಉಳಿಯುವಂತೆ ಮಾಡುವ ಕಾರ್ಯವನ್ನು ಧಾರವಾಡದ ದಿಗಂಬರ ಸಮಾಜದವರು ಸೇರಿ ಪೂರ್ಣಗೋಳಿಸಿರುತ್ತಾರೆ. ಇದಕ್ಕೆ ಪ್ರೇರಣೆ ಮತ್ತು ಆರ್ಶೀವಾದ ನೀಡಿದ ಪರಮ ಪೂಜ್ಯ ಶ್ರೀ 108 ಬಾಲಾಚಾರ್ಯ ಸಿದ್ಧಸೇನ ಮುನಿಮಹಾರಾಜರು ಹಾಗೂ ಪರಮಪೂಜ್ಯ 108 ಆಚಾರ್ಯ ಶ್ರೀ ಜ್ಞಾನೇಶ್ವರ ಮುನಿಮಹಾರಾಜರನ್ನು ನಾವಿಲ್ಲಿ ಸ್ಮರಿಸಲೇಬೆಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಇವರು ಧನ ಸಹಾಯದೊಂದಿಗೆ ಆರ್ಶಿವದಿಸಿದ್ದಾರೆ ಎಂದರು.
ಪಂಚಕಲ್ಯಾಣ ಸಮಾರಂಭದಲ್ಲಿ ಕೊಲ್ಲಾಪುರದ ಪುಣ್ಯಸಾಗರ ಮುನಿಮಹಾರಾಜರು ಸ್ವಸ್ತಿಶ್ರೀ ಪ ಪೂ ಲಕ್ಷ್ಮೀ ಸೇನ ಭಟ್ಟಾರಕರು. ಸೋಂದಾ ಸ್ವಸ್ತಿಶ್ರೀ ಪ ಪೂ ಭಟ್ಟಾಕಲಂಕ ಭಟ್ಟಾಚಾರ್ಯ ಭಟ್ಟಾರಕರು, ಹೋಂಬುಜದ ಸ್ವಸ್ತಿಶ್ರೀ ಪ ಪೂ ದೇವೇಂದ್ರ ಕೀರ್ತಿ ಭಟ್ಟಾರಕರು ಇತ್ಯಾದಿ ಜೈನ ಮಠಗಳ ಭಟ್ಟಾರಕರು ಉಪಸ್ಥಿತರಿದ್ದು ಆರ್ಶೀವದಿಸಲಿದ್ದಾರೆ. 26 ರಂದು ತೀರ್ಥಂಕರ ಗರ್ಭಕಲ್ಯಾಣ ಅಂಗವಾಗಿ ನೃತ್ಯ ರೂಪಕ, 27 ರಂದು ಪಾಂಡುಕ ಶಿಲೆಯ ಮೇಲೆ ಪಾಲತೀರ್ಥಂಕರರ 108 ಕಳಶಗಳಿಂದ ಅಭೀಷೇಕ, 28 ರಂದು ಭಗವಾನ ಪಾಶ್ರ್ವನಾಥ ತೀರ್ಥಂಕರರ 10 ಭವಾವಳಿ ಮತ್ತು ಮೋಕ್ಷ ಕಲ್ಯಾಣ ನಾಟಕ,29 ರಂದು ಸಾಯಂಕಾಲ ಸಮವಸರಣ ರಚನೆ, 30 ರಂದು ಭಗವಾನ ಆದಿನಾಥ ತೀರ್ಥಂಕರರ ಅಸಿ ಮಸಿ ಕೃಷಿ ಮತ್ತು ಅಕ್ಷರಾಭ್ಯಾಸ ರೂಪಕ. ಇವುಗಳನ್ನು ಶ್ರೀಮತಿ ಪದ್ಮಲತಾ ನಿರಂಜನ ಕುಮಾರ ಎಸ್.ಡಿ.ಎಮ್ ಕಾಲೇಜಿನ ಸಿಬ್ಬಂದಿಯೋಂದಿಗೆ ನಡೆಸಿಕೊಡುವರು ಎಂದರು.
5 ದಿನಗಳಲ್ಲಿ ಶ್ರೀಮತಿ ನಂದಿನಿ ಬಾಗಿ ಮತ್ತು ಸಂಗಡಿಗರಿಂದ ಶೃದ್ದಾವತಾರ ರೂಪಕ, ಶ್ರೀಮತಿ ನಮೃತಾ ಡೋರ್ಲೆ ಮತ್ತು ಸಂಗಡಿಗರಿಂದ ಜನ್ಮ ಕಲ್ಯಾಣ ರೂಪಕ, ಸ್ವಚ್ಚತಾ ಅಭಿಯಾನ ನಾಟಕ ಸಮ್ಯಕ್ ಪ್ರಜ್ಞಾ ಮಂಡಳದಿಂದ ನೃತ್ಯ ನಾಟಕ ಮತ್ತು ಜಿನ ಭಕ್ತಿ ಗೀತೆಗಳು ಜರುಗುತ್ತವೆ. ಈ ಸಮಾರಂಭದಲ್ಲಿ ಜಿಲ್ಲೆ ಹಾಗೂ ರಾಜ್ಯದಿಂದ ಅನೇಕ ಭಕ್ತಾಧಿಗಳು ಆಗಮಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಜಾತಾ ಹಡಗಲಿ, ಸುನೀಲ ಟಕಳೆ, ಮಹಾವೀರ ಉಪಾಧ್ಯ, ಡಾ.ಎ. ಬಿ. ಖೋತ್ ಉಪಸ್ಥಿತರಿದ್ದರು.

loading...