ಪಕ್ಷದಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿ: ಸುರೇಶ

0
47
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಪಕ್ಷ ಸಂಘಟನೆಯಲ್ಲಿ ಮತ್ತು ಸಾಮಾಜಿಕ ಸೇವೆಯಲ್ಲಿ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಕರ್ನಾಟಕದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ನೂತನ ಸದಸ್ಯರಾಗಿ 3 ವರ್ಷದ ವರೆಗೆ ನಾಮ ನಿರ್ದೇಶನ ಮಾಡಿರುತ್ತಾರೆ ಎಂದು ಸುರೇಶ ತಳವಾರ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ನೂತನ ಸದಸ್ಯರಾಗಿ ನೇಮಕರಾದ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ (ಪ.ಜಾತಿ) ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ ತಳವಾರ ಅಧಿಕಾರ ಸ್ವೀಕರಿಸಿ ಪ್ರಥಮಬಾರಿಗೆ ನಗರಕ್ಕೆ ಆಗಮಿಸಿ ಇವರನ್ನು ಜಿಲ್ಲಾ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ದಲಿತ ಮುಖಂಡರು, ನಗರದ ಡಾ. ಅಂಬೇಡ್ಕರ ಉದ್ಯಾನ ವನದಲ್ಲಿ ಬುಧವಾರ ಸ್ವಾಗತಿಸಿ ಸನ್ಮಾನಿಸಲಾಯಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷದವರು ಮತ್ತು ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಅರಿತು ಪ್ರಮಾಣಿಕವಾಗಿ ಸೇವೆ ಸಲ್ಲಿಸುವುದರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಒತ್ತು ನೀಡಿ ಜಿಲ್ಲೆಯ ಪರಿಶಿಷ್ಠ ಜಾತಿಯ ಎಲ್ಲ ನಾಯಕರನ್ನು ಕಾರ್ಯಕರ್ತರನ್ನು ಒಂದೆಡೆಗೆ ತಂದು ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಲು ಪ್ರಯತ್ನಿಸುತ್ತೇನೆಂದರು.
ಈ ಸಂಧರ್ಭದಲ್ಲಿ ಮಲ್ಲೇಶ ಚೌಗುಲೆ, ಅಶೋಕ ಕುಮಾರ ಆಸೂದೆ, ಅಣ್ಣಾಸಾಹೇಬ ಹಂಚಿನಮನಿ, ಲಕ್ಷ್ಮಣ ಲಗಮಪ್ಪಗೋಳ, ಆನಂದ ಕೆಳಗಡೆ, ಮೀನಾಕ್ಷಿ ಗಲಗಲಿ, ಕಲ್ಪನಾ ಡೊಂಕನವರ, ವಿಠ್ಠಲ್ ವಡ್ಡರ, ಅಶೋಕ ಐನಾವರ, ಪ್ರೋ| ಕೆ.ಡಿ. ಮಂತ್ರೇಶಿ, ದುರ್ಗೇಶ ಮೆತ್ರಿ, ಮಲ್ಲೇಶ ಕುರಂಗಿ, ಎಮ್. ಆರ್. ಭಂಗ್ಯಾಗೋಳ, ಪುರಂದರ ಧನಪಾಲ, ಗೌತಮ ಪಾಟೀಲ, ಸಿಕಂದರ ಕೋಲಕಾರ, ಬಾಬು ಕೋಲಕಾರ, ಕಸ್ತೂರಿ ಕೋಲಕಾರ, ಸುನೀಲ ಕೋಲಕಾರ, ಮೋಹನ್ ಕಂಗ್ರಾಳಕರ, ರಮೇಶ ತುಡಯೇಕರ, ಲಕ್ಷ್ಮಣ ಮ್ಯಾಗೇರಿ ಹೀಗೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...