loading...

ಕನ್ನಡಮ್ಮ ಸುದ್ದಿ-ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹನೀಫ್ ಸುತಗಟ್ಟಿ ಅಧ್ಯಕ್ಷರಾಗಿ ಮುಂದುವರೆಯಲು ಅರ್ಹರಿಲ್ಲವೆಂದು ಆಗ್ರಹಿಸಿ ಅವಿಶ್ವಾಸ ಮತ ತೊರ್ಪಡಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಐ.ಕೆ.ಗುಡದಾರಿಗೆ ಮನವಿ ಸಲ್ಲಿಸಿರುವ ಘಟನೆ ಶುಕ್ರವಾರ ನಡೆದಿದೆ. ಪಟ್ಟಣ ಪಂಚಾಯಿತಿಯ ಆಡಳಿತವು ಸಂಪೂರ್ಣವಾಗಿ ಹದೆಗೆಟ್ಟಿದ್ದು ಕಿತ್ತೂರಿನ ಜನತೆ ಆಕ್ರೋಷವನ್ನು ಸದಸ್ಯರುಗಳ ಮೇಲೆ ವ್ಯಕ್ತ ಪಡಿಸುತ್ತಿದ್ದು ಈ ವಿಷಯಕ್ಕೆ ಕುರಿತಂತೆ ಸದಸ್ಯರುಗಳು ಚರ್ಚಿಸಿ ಹನೀಫ್ ಸುತಗಟ್ಟಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅರ್ಹರಿಲ್ಲವೆಂದು ನಿರ್ಣಯ ಕೈಗೊಂಡು ಸಂವಿದಾನಾತ್ಮಕವಾಗಿ ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ಅವಿಶ್ವಾಸ ಮತ ತೋರ್ಪಡಿಸಬೇಕೆಂದು ಪಪಂ ಉಪಾಧ್ಯಕ್ಷ ಕಿರಣ ಪಾಟೀಲ, ಸದಸ್ಯರಾದ ಹನುಮಂತ ಲಂಗೊಟಿ, ನಾಗೇಶ ಸೊಂಟಕ್ಕಿ, ಬಸಮ್ಮ ತೊಟ್ಟಿಲಮನಿ, ಸಾವಿತ್ರಿಭಾಯಿ ಪತಂಗೆ, ಸಂಗೀತಾ ನಾಗಲಾಪೂರ, ಶೋಭಾ ದರ್ಶಿ, ಶೋಭಾ ಬೇಳೂರ, ಕಿರಣ ವಾಳದ ಮಹಾಂತೇಶ ನಾಗೂಜಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಕೆಲವೊಂದು ವಿಷಯಗಳಿಗೆ ಸಂಭಂದ ಪಟ್ಟಂತೆ ಗೊಂದಲಮಯವಾಗಿ ನಿರ್ಣಯ ತೆಗೆದುಕೊಂಡಿದ್ದು ಈ ಕುರಿತು ಹಲವು ಭಾರಿ ಮನವಿ ಮಾಡಿಕೊಂಡಿದ್ದರೂ ಸಹ ಸದಸ್ಯರ ಮಾತುಗಳನ್ನು ಕಡೆಗಣಿಸಿದ್ದಾರೆ, ಬೇಜವಾಬ್ದಾರಿ ನಡೆದುಕೊಂಡಿದ್ದಾರೆಂದು 10 ಜನ ಸದಸ್ಯರು ಮನವಿಯಲ್ಲಿ ಆರೋಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿಯ 10 ಜನ ಸದಸ್ಯರುಗಳು. ಓರ್ವ ಪಟ್ಟಣ ಪಂಚಾಯಿತಿ ಸದಸ್ಯರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಕಿರಣ ಪಾಟೀಲ, ಅಧ್ಯಕ್ಷರ ಆಡಳಿತ ವೈಕರಿ ಸರಿಯಿಲ್ಲ ಅಲ್ಲದೆ ಪಟ್ಟಣ ಪಂಚಾಯತಿ ಆಡಳಿತವು ಸಂಪೂರ್ಣ ಹದಗೆಟ್ಟಿದ್ದ ಕಾರಣ ಪಕ್ಷಾತೀತವಾಗಿ 10 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ಅವಿಶ್ವಾಸ ಮತ ತೋರಿಸುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ಮೂಲಕ ಆಗ್ರಹಿಸಿದ್ದೇವೆ. ಪಟ್ಟಣ ಪಂಚಾಯತಿ ಸದಸ್ಯ ಹನುಮಂತ ಲಂಗೋಟಿ ಮಾತನಾಡಿ, ಪಟ್ಟಣ ಪಂಚಾಯಿತಿ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ನಡೆಸಿದ್ದಾರೆ ಅಲ್ಲದೆ ಕಿತ್ತೂರು ಪಟ್ಟಣದ ಅಭಿವೃದ್ಧಿ ವಿಫಲರಾಗಿದ್ದಾರೆ. ಅಲ್ಲದೆ ಸಾಕಷ್ಟು ಕಳಪೆ ಕಾಮಗಾರಿಗಳು ನಡೆದಿವೆ. ಎಲ್ಲ ಸದಸ್ಯರ ಗಣನೆಗೆ ತೆಗೆದುಕೊಂಡು ಆಡಳಿತ ನಡೆಸದೆ ಬಂದ ಅನುದಾನದಲ್ಲಿ ಸಿಂಹ ಪಾಲು ಅಧ್ಯಕ್ಷರು ಅವರ ವಾರ್ಡಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.. ಪಟ್ಟಣ ಪಂಚಾಯತಿ ಸದಸ್ಯ ಕಿರಣ ವಾಳದ ಮಾತನಾಡಿ, ಪಟ್ಟಣ ಪಂಚಾಯತಿ ಅಧ್ಯಕ್ಷರು ಬೇಕಾಬಿಟ್ಟಿಯಾಗಿ ಆಡಳಿತ ನಡೆಸುತ್ತಿರುವ ಕಾರಣ ಪಟ್ಟಣದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದೇವೆ ಆದ ಕಾರಣ ಪಕ್ಷಾತೀತವಾಗಿ ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಈ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಈ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಮಾಹಿತಿ : ಒಟ್ಟು 18 ವಾರ್ಡುಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು 9 ವಾರ್ಡಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿದ್ದವು ಹಾಗೂ 7 ವಾರ್ಡಗಳು ಬಿಜೆಪಿಯ ಪಾಲಾಗಿದ್ದರೆ 2 ವಾರ್ಡಗಳು ಪಕ್ಷೇತರರ ಹಿಡಿತದಲ್ಲಿದ್ದವು. ಈ ಕುರಿತಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಹನೀಫ್ ಸುತಗಟ್ಟಿ ಬಿಜೆಪಿಯ 7 ಸದಸ್ಯರ ಹಾಗೂ ಓರ್ವ ಪಕ್ಷೇತರರ ಹಾಗೂ ಸಂಸದರ ಮತವನ್ನು ಪಡೆದುಕೊಂಡು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು ಉಪಾಧ್ಯಕ್ಷ ಸ್ಥಾನವು ಬಿಜೆಪಿಯ ಪಾಲಾಗಿತ್ತು ಕೋಟ್ : ಹನೀಫ್ ಸುತಗಟ್ಟಿ ( ಪಟ್ಟಣ ಪಂಚಾಯಿತಿ ಅಧ್ಯಕ್ಷ ) ಈ ಬೆಳವಣಿಗೆಗೆ ಸಂಭಂದ ಪಟ್ಟಂತೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಎಲ್ಲ ಸದಸ್ಯರ ಬೆಂಬಲ ನನಗಿದೆ ಅವರ ಬೇಡಿಕೆಯಂತೆ ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ವಿಶ್ವಾಸವನ್ನು ವ್ಯಕ್ತ ಪಡಿಸುತ್ತೆನೆ.

loading...