ಪಿಜಿಸಿಇಟಿಯಲ್ಲಿ 12 ಸಾವಿರ ಎಂಬಿಎ ಸರ್ಕಾರಿ ಸೀಟ್‍ಗಳು ಲಭ್ಯ

0
83
loading...

ರಾಜ್ಯದ್ಯಂತ ಅರ್ಜಿ ಪ್ರಾರಂಭ | ಅರ್ಜಿಗೆ ಕೊನೆಯ ದಿನ ಜೂ. 1
ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕ ಪರೀಕ್ಷಾ (ಕೆಇಎ) ವತಿಯಿಂದ ರಾಜ್ಯದ ಕೇಂದ್ರಗಳಲ್ಲಿ ಜು. 2 ರಂದು ಎಂಬಿಎ ಕೋರ್ಸ್ ಮಾಡಲು ಅಹತ್ವಾಕಾಂಕ್ಷಿಯ ವಿದ್ಯಾರ್ಥಿಗಳಿಗೆ ಪೋಸ್ಟ್ ಗ್ರ್ಯಾಜ್ಯುಯೇಟ್ ಕಾಮನ್ ಎಂಟ್ರನ್ಸ್ ಟೆಸ್ಟ್ ನಡೆಸಲಿದೆ ಎಂದು ಐಎಂಇಆರ್ ಸಂಸ್ಥೆಯ ನಿರ್ದೇಶಕ ಡಾ. ಪುರಶೊತ್ತಮ್ ಬಂಗ್ ಹೇಳಿದರು.
ಇಂದು ನಗರದ ಐಎಂಇಆರ್ ಕಾಲೇಜ್ ಸಭಾ ಭವನದಲ್ಲಿ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಅವರು. ಸರ್ಕಾರಿ ಕೋಟಾ ಅಡಿ ಯಾರು ಶಿಕ್ಷಣ ಕಲಿಯ ಬಯಸುತ್ತಾರೊ ಅಂತವರಿಗೆ ಕೆಇಎಯು ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದ್ದು ಆ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು. ವೆಬ್ ವಿಳಾಸ http://kea.kar.nic.in.
ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟ್ ನೀಡಲಾಗುತ್ತದೆ. ರಾಜ್ಯದ್ಯಂತ ಒಟ್ಟು 24,000 ಸಾವಿರ ವಿದ್ಯಾರ್ಥಿಗಳಿಗೆ ಸೀಟ್ ಲಭ್ಯವಿದ್ದು ಅದರಲ್ಲಿ 12 ಸಾವಿರ ಸರ್ಕಾರಿ ಸೀಟ್‍ಗಳು ಪಿಜಿಸಿಇಟಿ ಕೌನ್ಸಿಲ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಲ್ಲದೇ ಜೂ. 19 ರಿಂದ ಕ್ರ್ಯಾಸ್ ಕೋರ್ಸ್‍ಗೆ ಒಂದು ವಾರ ಪರಿಕ್ಷೇಯನ್ನು ಯಾವ ರೀತಿಯಾಗಿ ಎದುರಿಸಬೇಕು ಯಾವ ದಂಡಮಾನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಎಂಬುವುದನ್ನು ತರಬೇತಿಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಇನ್ನು ಉತ್ತರ ಕರ್ನಾಟಕದ ಖಾಸಗಿ ನಿರ್ವಹಣಾ ಸಂಸ್ಥೆಗಳ ಅಸೋಸಿಯೇಷನ್ (ಎಪಿಎಂಐಕೆಕೆ) ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯಾವ ವಿಷಯದಲ್ಲಿ ಪದವಿಯನ್ನು ಪಡೆದವರು ಈ ಕೋಸ್ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿಯ ಪ್ರಾರಂಭವಾಗಿದ್ದು, ಅರ್ಜಿ ಜೂ. 1 ರಂದು ಮುಕ್ತಾಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಐಎಂಇಆರ್ ಸಂಸ್ಥೆಯ ಸಹಾಯವಾಣಿಗೆ 0831-2405511/12 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಗಟೆ ಕಾಲೇಜಿನ ಎಚ್‍ಒಡಿ ಪ್ರವೀಣ ಕುಲಕರ್ಣಿ, ಎಐಎಂಆರ್ ನಿರ್ದೇಶಕರು ಮಾಧುರಿ ಹೆಬಾಳ್ಕರ್, ಜೈನ್ ಸಂಸ್ಥೆಯ ನಿರ್ದೇಶಕ ಡಾ. ಸಂದೀಪ್ ನಾಯಕ್, ಕೆಎಲ್‍ಎಸ್ ಡಾ. ಅರೀಫ್ ಶೇಖ ಸೇರಿದಂತೆ ಇತರರು ಇದ್ದರು.

loading...