ಪಿಟಿಐಎಸ್ ಸ್ಮಾರ್ಟ್ ಆ್ಯಪ್‍ನಲ್ಲಿ ಪಾಲಿಕೆಯ ಸೇವೆಗಳು

0
46
http://www.dreamstime.com/royalty-free-stock-image-image34496856
loading...

6 ತಿಂಗಳ ಒಳಗಾಗಿ ಸೇವೆಗೆ ಸಿದ್ದ | ಸುಮಾರು 40 ಲಕ್ಷ ವೆಚ್ಚ

ಕೆ ಎಮ್. ಪಾಟೀಲ

ಬೆಳಗಾವಿ: ಕುಂದಾನಗರಿ ಸ್ಮಾರ್ಟ್ ಸಿಟಿಯ ಆಗುತ್ತಿರುವ ಬೆನ್ನಲ್ಲೆ ಮಹಾನಗರ ಪಾಲಕೆಯು ಪ್ರಾಪರ್ಟಿ ಟ್ಯಾಕ್ಸ್ ಐಡೆಂಟಿ ಸಿಸ್ಟಮ್ (ಪಿಟಿಐಎಸ್) ಎಂಬ ಸ್ಮಾರ್ಟ್ ಆ್ಯಪ್‍ನಲ್ಲಿ ಎಲ್ಲ ರೀತಿಯ ಕರವನ್ನು ಸಾರ್ವಜನಿಕರು ಮನೆಯಲ್ಲಿಯೆ ತುಂಬಬಹುದಾಗಿದೆ.
ನಗರದಲ್ಲಿ ಮಹಾನಗರ ಪಾಲಿಕೆಯಿಂದ ಸಾಕಷ್ಟು ಕೆಲಸಗಳನ್ನು ಅಂತರ ಜಾಲದ ಮೂಲಕ ಕೆಲಸವನ್ನು ಮಾಡುವ ಉದ್ದೇಶದಿಂದ ಪಾಲಿಕೆಯ ಬಜೆಟ್‍ನಲ್ಲಿ ಇದಕ್ಕಾಗಿಯೇ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ವ್ಯವಸ್ಥೆಯನ್ನು ಮಾಡುವುದರಿಂದ ಪಾಲಿಕೆ ಉತ್ತಮ ಆದಾಯದ ಜೊತೆಗೆ ಆಡಳಿತವನ್ನು ನಡೆಸುವ ಕಲ್ಪನೆಯನ್ನು ಹೊಂದಲಾಗಿದೆ ಸಧ್ಯದಲ್ಲಿಯೆ ಇದು ಕೇವಲ ಆರು ತಿಂಗಳ ಒಳಗಾಗಿ ಜಾರಿಗೆಯಾಗಲಿದೆ.
ಪಾಲಿಕೆಯ ವ್ಯಪ್ತಿಗೆ ಒಳಪಡುವ ವ್ಯಾಪಾರ ಮಳಿಗೆ, ಚಿತ್ರಮಂದಿರ, ಮಾಲ್‍ಗಳು, ಸಮುದಾಯ ಭವನ, ಕಾಲಿಜಾಗೆ ಸೇರಿದಂತೆ ಒಟ್ಟು 34 ಸೇವೆಗಳನ್ನು ಆನ್‍ಲೈನ್ ಸೆಟ್‍ಲೈಟ್‍ಗಳ ಮೂಲಕ ನಿಯಂತ್ರಣ ಮಾಡಲಾಗುತ್ತದೆ ಎಂದು ಆಯುಕ್ತ ಶಶೀಧರ ಕುರೇರ ಕನ್ನಡಮ್ಮಗೆ ತಿಳಿಸಿದರು.
ಜಿಐಎಸ್ ಅಳವಡಿಕೆ: ಜಿಯೋಗ್ರಫಿ ಇನ್‍ಫಾರ್ಮೆಷನ್ ಸಿಸ್ಟಮ್ ಎಂಬುದನ್ನು ಅಳವಡಿಸಲಾಗುತ್ತದೆ. ಇದರಿಂದ ಪಾಲಿಕೆಯ ಪ್ರತಿಯೊಂದು ಆಸ್ತಿಗಳು ಈ ಆ್ಯಪ್‍ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಯಾವುದೇ ಅಕ್ರಮ ಆಸ್ತಿಯನ್ನು ಪಡೆಯುವಂತಹ ವ್ಯಕ್ತಿಗಳನ್ನು ಈ ಆಪ್ ಕಂಡು ಹಿಡಿಯುತ್ತದೆ.
ಪಿಐಡಿ: ಎಂದರೆ ಪ್ರಾಪರ್ಟಿ ಐಡಂಟಿ ಸಂಖೆ ಇದು ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲ ಕಟ್ಟಡಗಳು, ಜಾಗೆಗಳು, ಮಾಲ್‍ಗಳು ಸೇರಿದಂತೆ ಎಲ್ಲ ಆಸ್ತಿಗಳಿಗೆ ಒಂದು ಸಂಖ್ಯೆಯನ್ನು ಪಾಲಿಕೆಯಿಂದ ನೀಡಲಾಗುತ್ತದೆ ಇದರಿಂದ ಆ ಆಸ್ತಿಯ ಎಲ್ಲ ಮಾಹಿತಿಯು ಆ್ಯಪ್‍ನಲ್ಲಿ ದೊರೆಯುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಇನ್ನೊಬ್ಬರಿಗೆ ಮಾರಲು ಹೋದಾಗ ಅದರ ತೆರಿಗೆಯನ್ನು ಪಾಲಿಕೆಯಲ್ಲಿ ಕಟ್ಟಿದ್ದಾನೊ ಇಲ್ಲವೊ ಎಂದು ತಿಳಿಯುತ್ತದೆ. ಹಾಗೇಯೆ ತೆರಿಗೆಯನ್ನು ಪೂರ್ಣವಾಗಿ ಕಟ್ಟುವವರೆಗೂ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಲು ಬರುವುದಿಲ್ಲ.
ಈ ಆ್ಯಪ್‍ಗೆ ತಗಲುವ ಖರ್ಚು: ಪಾಲಿಕೆಯಿಂದ ಹೊಸ ಆ್ಯಪ್‍ನ್ನು ಸಿದ್ದಪಡಿಸಲು ಸುಮಾರು 35 ರಿಂದ 40 ಲಕ್ಷ ವೆಚ್ಚವಾಗಲಿದ್ದು, ಸಧ್ಯದಲ್ಲಿಯೇ ಆರು ತಿಂಗಳಲ್ಲಿ ಪಾಲಿಕೆ ಎಲ್ಲ ವ್ಯವಹಾರಗಳನ್ನು ಪಿಟಿಐಎಸ್ ಆ್ಯಪ್ ಮೂಲಕ ಸೇವೆಯನ್ನು ನೀಡಲಾಗುತ್ತದೆ.
ಸಾರ್ವಜನಿಕರಿಗೆ ಸುಲಭ: ಸಾರ್ವಜನಿಕರು ಪಾಲಿಕೆಯ ಕರವನ್ನು ತುಂಬಲು ಸರದಿ ಸಾಲಿನಲ್ಲಿ ಬೆಳಗಾವಿ ಒನ್‍ನಂತಹ ಕೇಂದ್ರಗಳಲ್ಲಿ ತುಂಬುತ್ತಿದ್ದರು ಇಲ್ಲಿ ಕ್ಯೂ ನಿರಂತರ ಇರುವುದರಿಂದ ಕೆಲವೊಬ್ಬರಿಗೆ ಇದು ಹಿಂಸೆ ಆಗುತ್ತಿತ್ತು ಅಂತವರು ಈಗ ಮನೆಯಲ್ಲಿಯೇ ತಮ್ಮ ಮೊಬೈಲ್‍ನಲ್ಲಿ ಆನ್‍ಲೈನ್ ಹಣವನ್ನು ಪಾವತಿಸಬಹುದಾಗಿದೆ.

ಇಗಾಗಲೇ ರಾಜ್ಯದಲ್ಲಿ ಮೈಸೂರು, ತುಮಕುರು ಜಿಲ್ಲೆಗಳಲ್ಲಿ ನೀರು, ವಿದ್ಯುತ್ ಕರವನ್ನು ವಸೂಲಿ ಮಾಡಲು ಇಂತಹ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಆದರೆ, 34 ಸೇವೆಗಳನ್ನು ಒಂದೆ ಆ್ಯಪ್‍ನಲ್ಲಿ ಅಳವಡಿಕೆ ಮಾಡುತ್ತಿರುವ ಜಿಲ್ಲೆ ಬೆಳಗಾವಿ ಮಾತ್ರ.
ಬಾಕ್ಸ್
ಪಾಲಿಕೆಗೆ ಕರವನ್ನು ತುಂಬಲು ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿಯನ್ನು ನಿಲ್ಲಿಸುವ ಉದ್ದೇಶಕ್ಕೆ ಈ ಆ್ಯಪ್‍ನ್ನು ಒಟ್ಟು 34 ಸೇವೆಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ಅಕ್ರಮ ಸಂಭವಿಸುವುದಿಲ್ಲ. ಇದಕ್ಕೆ ಸುಮಾರು 40 ಲಕ್ಷ ವೆಚ್ಚ ತಗಲುತ್ತದೆ 6 ತಿಂಗಳ ಒಳಗಾಗಿ ಸೇವೆಗೆ ಸಿದ್ದಗೊಳ್ಳಲಿದೆ.
-ಶಶೀಧರ ಕುರೇರ ಮಹಾನಗರ ಪಾಲಿಕೆ ಆಯುಕ್ತರು, ಬೆಳಗಾವಿ.

loading...