ಪಿಯು ರಿಸಲ್ಟ್ ಪ್ರಕಟ: ಟಾಪ್ 10ನಲ್ಲಿ ಬಾರದ ಕುಂದಾನಗರಿ

0
912
loading...

 
ಕನ್ನಡಮ್ಮ ಸುದ್ದಿ
ನಿರೀಕ್ಷೆಯಂತೆ ಈ ಬಾರಿ ಯಾವುದೇ ಗೊಂದಲವಿಲ್ಲದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಜಿಲ್ಲೆ ಪ್ರಥಮಗಳಿಸಿದರೇ ಬೆಳಗಾವಿ ಜಿಲ್ಲೆ ಮಾತ್ರ ಟಾಪ್ 10ರಲ್ಲಿ ಬೆಳಗಾವಿ ಜಿಲ್ಲೆಗೆ 28ನೇ ಸ್ಥಾನ ಬಂದಿದೆ.
ಎಂದಿನಂತೆ ಉಡುಪಿ ಜಿಲ್ಲೆ ಅಗ್ರ ಸ್ಥಾನ ಕಾಯುವಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಪರೀಕ್ಷೆಯಲ್ಲಿ ರಾಜ್ಯದ 48 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿತ್ತು. ಈ ಬಾರಿ ಯಾವುದೇ ಅಕ್ರಮಗಳಿಗೆ ಅವಕಾಶ ಮಾಡಿಕೊಡದೆ ಜಿಲ್ಲೆಯಲ್ಲಿ ಸುಸಜ್ಜಿತವಾಗಿ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದ ಬೆಳಗಾವಿ ಜಿಲ್ಲೆ. ಈ ಬಾರಿ ರಾಜ್ಯದ 10 ಸ್ಥಾನಗಳಲ್ಲಿ ಬರಬಹುದೆಂಬ ನಿರೀಕ್ಷೆಯನ್ನು ಜಿಲ್ಲೆಯ ಜನರು ಇಟ್ಟುಕೊಂಡಿದ್ದರು ಆದರೆ ಟಾಪ್ 10ರಲ್ಲಿ ಬಾರದಿರುವುದು ಬೇಸರ ಮೂಡಿಸಿದೆ. ಉಡುಪಿ ಜಿಲ್ಲೆಯ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಉತ್ತರ ಕನ್ನಡ ಜಿಲ್ಲೆ ತೃತೀಯ, ಶಿವಮೊಗ್ಗ ನಾಲ್ಕು, ಚಿಕ್ಕಮಗಳೂರು ಐದನೇ ಸ್ಥಾನ ಪಡೆದಿದೆ.
ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಕಳೆದ ಬಾರಿ 91 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿತ್ತು,

loading...