ಪ್ರೀತಿಯ‌ ಮದುವೆಗೆ ವಿಲನ್ ಆದ ಗಂಡ

0
264
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:20 ಅನ್ಯ‌ ಕೋಮಿನ ಯುವಕನನ್ನ ಪ್ರೀತಿಸಿದ ತಪ್ಪಿಗೆ, ಪೆಟ್ರೋಲ್ ಹಾಕಿ ಸುಟ್ಟರು ಕೂಡ ಆತನೊಂದಿಗೆ ಜೀವನ ನಡೆಸಿದ ಯುವತಿಗೆ ಪತಿರಾಯ ನೀಡಬಾರದ ಹಿಂಸೆ ನೀಡಿ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕಿದ್ದಾನೆ.
ಈತನ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರು ಬೆಂಬಲವಾಗಿ ನಿಂತಿದ್ದು ಅಮಾಯಕ ಯುವತಿಯ ಬಾಳು ಅತಂತ್ರವಾದ ಘಟನೆ ನಿಪ್ಪಾಣಿ ಗಡಿಭಾಗದ ಕಾಗಲ್ ತಾಲೂಕಿನ ಕರನೂರ ಗ್ರಾಮದಲ್ಲಿ ನಡೆದಿದೆ.
ಜೈನಬಿ ಶೇಖ ಎಂಬ ಯುವತಿ ಹಾಗೂ ನಿಪ್ಪಾಣಿ ತಾಲೂಕು ಕೊಗನೊಳ್ಳಿ ಗ್ರಾಮದ ಸಚಿನ್ ಇಂಗವಲೆ ಎಂಬ ಯುವಕ ಪರಸ್ಪರ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದರು.
ಮದುವೆಯಾದ ನಂತರ ಕೆಲ ದಿನಗಳ ಕಾಲ ಚೆನ್ನಾಗಿದ್ದ ಇವರ ಪ್ರೀತಿಗೆ ಒಂದು ಮಗು ಕೂಡ ಜನಿಸಿದೆ. ಇದರ ನಡುವೆ ಮನೆಯವರ ಒತ್ತಾಯದ ಮೇರೆಗೆ ಮತ್ತೊಂದು ಮದುವೆಯಾದ ಸಚೀನ್ ಇಂಗವಲೆ ಮೊದಲ ಪತ್ನಿ ಜೈನಬಿಯನ್ನ ರಾತ್ರಿ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಇಷ್ಟೆಲ್ಲಾ ಆದರೂ ಗಂಡನನ್ನು ಬಿಟ್ಟು ಕೊಡದ ಜೈನಬಿ ತಾನೇ ಮನೆಯಲ್ಲಿ ಕೆಲಸ ಮಾಡುವಾಗ ಮೈಮೇಲೆ ಪೆಟ್ರೋಲ್ ಬಿದ್ದಿದೆ ಎಂದು ಹೇಳಿಕೆ ನೀಡಿ ಗಂಡನನ್ನು ಉಳಿಸಿದ್ದಾಳೆ.
ಇದಾದ ಬಳಿಕ ಮತ್ತೇ ಕ್ಯಾತೆ ತೆಗೆದ ಸಚೀನ್ ಈ ಮಗು ತನ್ನದಲ್ಲ ಎಂದು ಪದೇ ಪದೇ ಜಗಳವಾಡಿ ಕೊಲ್ಲುವ ಬೆದರಿಕೆಯೊಡ್ಡಿದ್ದಾನೆ. ಸಚೀನನ್ ಈ ಪುಂಡಾಟಕ್ಕೆ ಮಾಜಿ ಸಚಿವ ವೀರಕುಮಾರ ಪಾಟೀಲ ಬೆಂಬಲವಾಗಿ ನಿಂತಿದ್ದು ಈ ವೀರಕುಮಾರ ಪಾಟೀಲ್ ಮಗ ಮತ್ತು ಈ ದುಷ್ಟ ಸಚೀನ್ ಇಂಗವಲೇ ಸ್ನೇಹಿತರಾಗಿದ್ದಾರೆ.
ಇವರ ಪುಂಡಾಟಕ್ಕೆ ಬೇಸತ್ತ ಯುವತಿ ನಿಪ್ಪಾಣಿ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪೋಲಿಸರು ಆರೋಪಿ ಪತಿಯನ್ನ ಬಂಧಿಸಿದ್ದಾರೆ. ಆರೋಪಿ ಬೆನ್ನಿಗೆ ನಿಂತಿರುವ ಮಾಜಿ ಸಚಿವ ವೀರಕುಮಾರ ಪಾಟೀಲ್ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದು ನೊಂದ ಯುವತಿ ರಕ್ಷಣೆಗಾಗಿ ಪತ್ರಕರ್ತರ ಮೊರೆ ಬಂದಿದ್ದಾಳೆ.

loading...