ಖಾನಾಪುರ: ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯ್ತಿ ವತಿಯಿಂದ 2016-17ನೇ ಸಾಲಿನ ಗ್ರಾಪಂ ಅನುದಾನದಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆ ಕಾರ್ಯಕ್ರಮ ಶುಕ್ರವಾರ ಗ್ರಾಪಂ ಸಭಾಗೃಹದಲ್ಲಿ ಜರುಗಿತು. ಗ್ರಾಪಂ ಅಧ್ಯಕ್ಷೆ ವರ್ಷಾ ದೇಸಾಯಿ, ಉಪಾಧ್ಯಕ್ಷೆ ಮಂಜುಳಾ ಪಾಟೀಲ ಗ್ರಾಪಂ ವ್ಯಾಪ್ತಿಯ ಪ್ರಭುನಗರ, ಗಣೆಬೈಲ ಮತ್ತು ನಿಟ್ಟೂರು ಫಲಾನುಭವಿಗಳಿಗೆ ಸಿಲಿಂಡರ್ ಮತ್ತು ಎಲ್.ಪಿ.ಜಿ ಕಿಟ್ ವಿತರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿಡಿಒ ಆನಂದ ಭಿಂಗೆ, ಅರಣ್ಯದಂಚಿನ ಗ್ರಾಮಗಳ ಜನರು ಉರುವಲಿಗಾಗಿ ಅರಣ್ಯಕ್ಕೆ ತೆರಳಳಿ ಕಟ್ಟಿಗೆ ಕಡಿಯುವುದರಿಂದ ಅರಣ್ಯನಾಶ ಉಂಟಾಗುತ್ತಿದ್ದು, ಕಟ್ಟಿಗೆಯ ಒಲೆ ಬಳಸುವುದರಿಂದ ಅಡುಗೆ ಮನೆಯಲ್ಲಿ ಹೊಗೆ ಏರ್ಪಟ್ಟು
ಆರೋಗ್ಯಕ್ಕೂ ಹಾನಿಯಾಗುತ್ತದೆ. ಇದನ್ನು ತಡೆಯಲು ಗ್ರಾಪಂ ವತಿಯಿಂದ ಆಯ್ದ ಬಡಜನರಿಗೆ ಉಚಿತವಾಗಿ ಎಲ್.ಪಿ.ಜಿ ಕಿಟ್ ವಿತರಿಸುತ್ತಿದ್ದು, ಇದರ ಸದುಪಯೋಗ ಪಡೆಯಲು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ತಾಪಂ ಉಪಾಧ್ಯಕ್ಷ ಸುರೇಶ ದೇಸಾಯಿ, ಗೋಧೊಳಿ ಗ್ರಾಪಂ ಪಿಡಿಒ ಧರಣೇಂದ್ರಕುಮಾರ, ಎಚ್.ಪಿ ಗ್ಯಾಸ್ ವಿತರಕ ಮಹಾಂತೇಶ ರಾಹುತ, ಬಸಪ್ಪ ಕೊಣ್ಣೂರಿ, ಶ್ರೀಕಾಂತ ಪಾಟೀಲ ಮತ್ತಿತರರು ಇದ್ದರು. ಸಿದ್ಧಪ್ಪ ನಾಯ್ಕ ಸ್ವಾಗತಿಸಿದರು. ಮಾರುತಿ ಕುಂಬಾರ ವಂದಿಸಿದರು.
loading...