loading...

ಕನ್ನಡಮ್ಮ ಸುದ್ದಿ-ಧಾರವಾಡ : ಜೆ.ಎಸ್.ಎಸ್ ಆರ್.ಎಸ್ ಹುಕ್ಕೇರಿಕರ್ ಪದವಿ ಪೂರ್ವ ಕಾಲೇಜಿನ ಕು. ಅಭಿಷೇಕ ಕನ್ನೂರು 2016 ರ ಕಿಶೋರ ವೈಜ್ಞಾನಿಕ ಪ್ರೋತ್ಸಾಹ ಯೋಜನೆಯ ಫೆಲೊಶಿಪ್‍ಗೆ ಆಯ್ಕೆಯಾಗಿದ್ದಾರೆ.
ಭಾರತ ಸರಕಾರ ಮೂಲ ವಿಜ್ಞಾನದ ಬೆಳವಣಿಗೆ ಹಾಗೂ ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮೂಲ ವಿಜ್ಞಾನದಲ್ಲಿ ಆಸಕ್ತಿ ಇರುವ ಹಾಗೂ ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ನಡೆಸುವ ಈ ಪರೀಕೆಯಲ್ಲಿ ಆಯ್ಕೆಯಾಗುವವರಿಗೆ ಪದವಿ ಹಂತದ ವರೆಗೆ ಪ್ರತಿ ತಿಂಗಳು ರೂ 5000/- ಶಿಷ್ಯವೇತನ, ಸ್ನಾತಕೋತ್ತರ ಪದವಿ ಹಂತದವರೆಗೆ ರೂ 7000/- ಶಿಷ್ಯವೇತನ ನೀಡಲಾಗುತ್ತದೆ. ಇದಕ್ಕೂ ಮುನ್ನ ಈ ವಿದ್ಯಾರ್ಥಿಯು ಎನ್.ಟಿ.ಎಸ್.ಇ ಸ್ಕಾಲರ್, ಕರ್ನಾಟಕ ರಿಜಿನಲ್ ಮೆಥೆಮೆಟಿಕಲ್ ಓಲಂಪೈಡ-2016 ಕ್ವಾಲಿಫೈಯರ್, ಇಂಡಿಯನ್ ನ್ಯಾಶನಲ್ ಮೆಥೆಮೆಟಿಕಲ್ ಓಲಂಪೈಡ-2017 ಸರ್ಟಿಫಿಕೇಟ್ ಆಫ್ ಮೆರಿಟ್ ಅವಾರ್ಡ ಮತ್ತು ಇಂಡಿಯನ್ ನ್ಯಾಶನಲ್ ಅಸ್ಟ್ರೋನೊಮಿ ಓಲಂಪೈಡ 2016-17 ಸ್ಟೇಜ್ 1 ಕ್ವಾಲಿಫೈಯರ್ ಗೂ ಸಹ ಆಯ್ಕೆಯಾಗಿರುತ್ತಾನೆ. ಈ ವಿದ್ಯಾರ್ಥಿಯು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ 8 ರಿಂದ 10 ನೇ ತರಗತಿಯವರೆಗೂ ವ್ಯಾಸಾಂಗ ಪಡೆದಿದ್ದು, ಈತನ ಸಾಧನೆಗೆ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ಪ್ರಾಚಾರ್ಯ ಶ್ರೀಮತಿ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

loading...