ಬಾಂಗ್ಲಾದ ಆರೋಪಿಗಳು ೧೪ ದಿನಗಳ ಕಾಲ ನ್ಯಾಯಾಂಗ ಬಂಧನ

0
133
loading...


ಕನ್ನಡಮ್ಮ ಸುದ್ದಿ
ಬೆಳಗಾವಿ : ಅಕ್ರಮವಾಗಿ ಬಾಂಗ್ಲಾದೇಶ ದಿಂದ ಭಾರತದಲ್ಲಿ ನುಸಳಿ ಬೆಳಗಾವಿ ನಗರದಲ್ಲಿ ವಾಸವಾಗಿದ್ದ ೭ ಜನ ಬಾಂಗ್ಲಾ ಆರೋಪಿಗಳನ್ನು ಶನಿವಾರ ಜೆಎಂಎಫ್ ಸಿ ೨ ನೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಜೆಎಂಎಫ್ ಸಿ ೨ ನೇ ನ್ಯಾಯಾಲಯದ ನ್ಯಾಯಾಧೀಶರಾದ ಚಂಪಕ ಅವರು ವಿಚಾರಣೆ ನಡೆಸ ಓರ್ವನನ್ನು ಒಂದು ದಿನದ ದಿನಸ ಮಟ್ಟಿಗೆ ಪೊಲೀಸ್ ವಿಚಾರಣೆಗೆ ಒಳಪಡಿಸಿ ಆದೇಶ ನೀಡಿದರು.
ಇನ್ನೂಳಿದ ೬ ಆರೋಪಿಗಳನ್ನು ೨೦-೫-೨೦೨೭ರ ವರೆಗೆ ಕೇಂದ್ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಅನ್ವರ ಸದ್ದಾರ, ಅಜುಬೇಗ, ಶೌಫಿ ಬೇಪಾರಿ, ಹಫೀಜ್ ಇಸ್ಲಾಂ, ಹಕೀಬ, ಅಬ್ದುಲ ಗಾಲಿ ಎಂಬ ಬಾಂಗ್ಲಾ ಪ್ರಜೆಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ  ಗಡಿಯೊಳಗೆ ನುಸುಳಿದ ಬಾಂಗ್ಲಾ ರವವಾಸಿಗಳು ಮಹ್ಮದ ಬೇಪಾರಿ ಅನಧಿಕೃತವಾಗಿ ಆಧಾರ ಕಾರ್ಡ, ರೇಷನ ಕಾರ್ಡಗಳನ್ನು ಮಾಡಿಸಿಕೊಂಡು ಪಾಸಪೋರ್ಟ ಮಾಡಿಸಿಕೊಳ್ಳಲು ತೆರಳಿದ ಸಂದರ್ಭದಲ್ಲಿ ಅವರಿಗೆ ಸ್ಥಳೀಯ ಭಾಷೆ ಮರಾಠಿ, ಕನ್ನಡ, ಇಂಗ್ಲೀಷ ಹಾಗೂ ಹಿಂದಿಯಲ್ಲಿ ಮಾತನಾಡಿಸಿದ್ದಾರೆ. ಅವರು ಮಾತನಾಡಿರುವುದು ಸಂಶಯ ಬಂದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಬಾಂಗ್ಲಾ ಪ್ರಜೆಗಳೆಂದು ತಿಳಿದು ಬಂದ ಕೂಡಲೇ ಮಾಳಮಾರುತಿ ಪೊಲೀಸರು ತನಿಖೆ ನಡೆಸಿ ಈ ಏಳು ಜನರನ್ನು ವಿಚಾರಣೆ ನಡೆಸಿ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದರು.

loading...