ಬಿಸಿಲಿನಲ್ಲಿ ಅಕ್ವೇರಿಯಂ ಮೀನಿನ ರಕ್ಷಣೆ

0
53
loading...

ಬೇಸಿಗೆ ಕಾಲದಲ್ಲಿ ನಾವು ನಮಗಾಗಿ ಬಿಸಿಲಿನಿಂದ ರಕ್ಷಣೆ ಪಡೆಯಲು ಏನೆಲ್ಲಾ ಕಸರತ್ತು ಮಾಡುತ್ತೇವೆ. ಆದರೆ ಅಕ್ವೇರಿಯಂನಲ್ಲಿರುವ ಮೀನುಗಳ ಗತಿಯೇನು…? ಆ ಮೀನುಗಳು ಅಕ್ವೇರಿಯಂ ಒಳಗೆ ಇದ್ದುಕೊಂಡು ಬಿಸಿ ನೀರಿನಲ್ಲಿ ಈಜಾಡುವಂತೆ ಆಗುತ್ತದೆ. ಹೀಗೆ ನೀರಿನ ಬಿಸಿ ಏರುತ್ತಿದ್ದರೆ ಮೀನು ಸಾವನ್ನಪ್ಪುತ್ತದೆ.
ನಿಮ್ಮ ಅಕ್ವೇರಿಯಂನ ನೀರು ಹೆಚ್ಚು ಬಿಸಿಯಾಗದಂತೆ ತಡೆಯಲು ಇಲ್ಲಿದೆ ಉಪಾಯ…

ಕ್ಲಿಪ್ ಫ್ಯಾನ್ ಹಾಕಿ :
ನಿಮ್ಮ ಮನೆಯ ಅಕ್ವೇರಿಯಂ ಬಳಿ ಒಂದು ಫ್ಯಾನ್ ಇಡಿ. ಅದು ನಿಮ್ಮ ಟ್ಯಾಂಕ್ ತಂಪಾಗಿರುವಂತೆ ನೋಡಿಕೊಳ್ಳುತ್ತದೆ. ಫ್ಯಾನ್ ಗಾಳಿ ಮೀನುಗಳಿಗೆ ಸರಿಯಾಗಿ ತಾಗುವಂತೆ ಅದನ್ನು ನೀವು ಟ್ಯಾಂಕ್ ಬಳಿ ಇರಿಸಿ.
ಯಾವಾಗಲೂ ನೀರು ಬದಲಾಯಿಸಿ :
ಟ್ಯಾಂಕ್‍ನಲ್ಲಿ ಬಿಸಿ ತಾಪಮಾನವನ್ನು ಕಡಿಮೆ ಮಾಡಲು ಪ್ರತಿದಿನ ನೀರನ್ನು ಬದಲಾಯಿಸುತ್ತಿರಿ. ಸಂಜೆ ಸಮಯ ನೀರನ್ನು ಬದಲಾಯಿಸಲು ಅತ್ಯಂತ ಉತ್ತಮ ಸಮಯವಾಗಿದೆ. ಸಂಜೆ ಸಮಯ ನಿಮ್ಮ ಗಾರ್ಡನ್‍ಗೆ ನೀರು ಹಾಕುವ ಸಮಯದಲ್ಲಿ ಫಿಶ್ ಟ್ಯಾಂಕ್ ನೀರನ್ನು ಸಹ ಬದಲಾಯಿಸಿ.
ಕಿಟಕಿಗಳನ್ನು ಬಂದ್ ಮಾಡಿ :
ನಿಮ್ಮ ಫಿಶ್ ಟ್ಯಾಂಕ್‍ನ್ನು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾದರೆ ಅದನ್ನು ನೀವು ಸೂರ್ಯನ ಕಿರಣಗಳು ಬೀಳದ ಜಾಗದಲ್ಲಿರಿಸಿ. ಒಂದು ವೇಳೆ ಟ್ಯಾಂಕ್ ದೊಡ್ಡದಾಗಿದ್ದರೆ ಬಿಸಿಲು ಬೀಳದಂತೆ ಕಿಟಕಿಗಳನ್ನು ಮುಚ್ಚಿ ಇಡಿ.
ಲೈಟ್ ಆಫ್ ಮಾಡಿ :
ಕೆಲವು ಫಿಶ್ ಪ್ರಿಯರು ಗಾಢವಾದ ಬೆಳಕಿನಲ್ಲಿ ತಮ್ಮ ಮೀನುಗಳು ಈಜುವುದನ್ನು ನೋಡಲು ಇಷ್ಟಪಡುತ್ತಾರೆ. ಅಲ್ಲದೇ ಅದನ್ನು ಅವರು ತಮ್ಮ ಡ್ರಾಯಿಂಗ್ ರೂಮ್‍ನಲ್ಲಿ ಇಡಲು ಇಷ್ಟಪಡುತ್ತಾರೆ. ಇದರಿಂದ ಅವರಿಗೆ ತಮ್ಮ ಅಕ್ವೇರಿಯಂನ ಲೈಟ್ ಆನ್ ಮಾಡಿ ಇಡಲೇಬೇಕಾಗುತ್ತದೆ. ಆದರೆ ಬೆಳಗಿನ ಸಮಯ ಲೈಟ್ ಆಫ್ ಮಾಡಿ ಇಡಿ, ಇದರಿಂದ ನೀರು ತಂಪಾಗುತ್ತದೆ, ಮೀನಿಗೆ ಈಜಲು ಸಹ ಅನುಕೂಲವಾಗುತ್ತದೆ.

loading...